ಗ್ರಾಮ ಪಂಚಾಯತ್ ಎಲೆಕ್ಷನ್ ನಲ್ಲಿ ಗೆದ್ದು ಬೀಗಿದ ತೃಣಮೂಲ ಕಾಂಗ್ರೆಸ್: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ - Mahanayaka

ಗ್ರಾಮ ಪಂಚಾಯತ್ ಎಲೆಕ್ಷನ್ ನಲ್ಲಿ ಗೆದ್ದು ಬೀಗಿದ ತೃಣಮೂಲ ಕಾಂಗ್ರೆಸ್: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ

12/07/2023


Provided by

ಪಶ್ಚಿಮ ಬಂಗಾಳದಲ್ಲಿ ಒಟ್ಟು 63,229 ಗ್ರಾಮ ಪಂಚಾಯತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 34,901 ಸ್ಥಾನಗಳನ್ನು ಗೆದ್ದು ನಗೆ ಬೀರಿದೆ.

ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ ಪ್ರಕಾರ ಬಿಜೆಪಿ 9,719 ಸ್ಥಾನಗಳೊಂದಿಗೆ ದೂರದ ಎರಡನೇ ಸ್ಥಾನದಲ್ಲಿದೆ. ಎಡರಂಗವು 3,083 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 2,542 ಸ್ಥಾನಗಳನ್ನು ಮತ್ತು ಇತರರು 2,896 ಸ್ಥಾನಗಳನ್ನು ಗೆದ್ದಿದ್ದಾರೆ .

ರಾಜ್ಯದ ಒಟ್ಟು 3,317 ಗ್ರಾಮ ಪಂಚಾಯತ್ ಗಳ ಪೈಕಿ 2,634ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಬಿಜೆಪಿ 220 ಗ್ರಾಮ ಪಂಚಾಯತ್ ಗಳನ್ನು ಗೆದ್ರೆ ಎಡರಂಗ 41 ಮತ್ತು ಕಾಂಗ್ರೆಸ್ ಐದು ಗ್ರಾಮ ಪಂಚಾಯತ್ ಗಳನ್ನು ಗೆದ್ದುಕೊಂಡಿದೆ.

ಐಎಸ್‌ ಎಫ್ ಒಂದೇ ಒಂದು ಗ್ರಾಮ ಪಂಚಾಯತನ್ನು ಗೆಲ್ಲಲು ವಿಫಲವಾಗಿದೆ. ವೆಬ್‌ಸೈಟ್ ಪ್ರಕಾರ 214 ಗ್ರಾಮ ಪಂಚಾಯತ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಇತರರು ಮುನ್ನಡೆ ಸಾಧಿಸಿದ್ದಾರೆ. 203 ಗ್ರಾಮ ಪಂಚಾಯಿತಿಗಳು ಅತಂತ್ರ ಸ್ಥಿತಿಗೆ ತಲುಪಿವೆ. ಉಳಿದ ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಪಂಚಾಯತ್ ಸಮಿತಿ ಸ್ಥಾನಗಳ ಪ್ರಕಾರ, ಒಟ್ಟು 9,740 ರಲ್ಲಿ 6,430 ಸ್ಥಾನಗಳನ್ನು ಟಿಎಂಸಿ ಗೆದ್ದಿದೆ. ಬಿಜೆಪಿ 982 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಎಡರಂಗ 180 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 266 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು ಅಭ್ಯರ್ಥಿಗಳು ಸೇರಿದಂತೆ ಇತರರು 279 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ.
ಒಟ್ಟು 341 ಪಂಚಾಯತ್ ಸಮಿತಿಗಳಲ್ಲಿ 264ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಬಿಜೆಪಿ ಒಂಬತ್ತು ಪಂಚಾಯತ್ ಸಮಿತಿಗಳನ್ನು ಗೆದ್ದುಕೊಂಡಿದ್ದು, ಎಡರಂಗ ಮೂರು ಗೆದ್ದಿದೆ. ಪಕ್ಷೇತರರು ಒಂಬತ್ತು ಪಂಚಾಯತಿ ಸಮಿತಿಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಪಂಚಾಯತ್ ಸಮಿತಿಗಳಲ್ಲಿ ಅತಂತ್ರ ಸ್ಥಿತಿ ಇದೆ.

ಒಟ್ಟು 928 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಟಿಎಂಸಿ 674 ಮತ್ತು ಬಿಜೆಪಿ 21 ಸ್ಥಾನ ಗೆದ್ದಿದೆ. ಎಡರಂಗ ಎರಡು ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿದೆ. ಒಂದು ಸ್ಥಾನ ಪಕ್ಷೇತರರ ಪಾಲಾಯಿತು. ಮತ ಎಣಿಕೆ ನಡೆಯುತ್ತಿರುವುದರಿಂದ ಉಳಿದ ಸೀಟುಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ರಾಜ್ಯದ ಎಲ್ಲಾ 20 ಜಿಲ್ಲಾ ಪರಿಷತ್‌ಗಳನ್ನು ಟಿಎಂಸಿ ಗೆದ್ದಿದೆ.

ರಾಜ್ಯವು 63,229 ಸ್ಥಾನಗಳೊಂದಿಗೆ 3,317 ಗ್ರಾಮ ಪಂಚಾಯತ್‌ಗಳನ್ನು ಹೊಂದಿದೆ. 9,730 ಸ್ಥಾನಗಳೊಂದಿಗೆ 341 ಪಂಚಾಯತ್ ಸಮಿತಿಗಳು ಮತ್ತು 928 ಸ್ಥಾನಗಳಿರುವ 20 ಜಿಲ್ಲಾ ಪರಿಷತ್ತುಗಳನ್ನು ಹೊಂದಿದೆ. ಜುಲೈ 8 ರಂದು 61,000 ಬೂತ್‌ಗಳಲ್ಲಿ ಚುನಾವಣೆ ನಡೆದಿದ್ದು, 80.71 ರಷ್ಟು ಮತದಾನವಾಗಿದೆ. ಕನಿಷ್ಠ 21 ಜನರ ಸಾವಿಗೆ ಕಾರಣವಾದ ವ್ಯಾಪಕ ಹಿಂಸಾಚಾರದಿಂದ ಆಸ್ತಿಗೂ ಹಾನಿಯಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ