ಐಫೋನ್ ಖರೀದಿಸಲು ಮಗುವನ್ನೇ ಮಾರಾಟ ಮಾಡಿದ ದಂಪತಿ..! - Mahanayaka

ಐಫೋನ್ ಖರೀದಿಸಲು ಮಗುವನ್ನೇ ಮಾರಾಟ ಮಾಡಿದ ದಂಪತಿ..!

27/07/2023


Provided by

ಪಶ್ಚಿಮ ಬಂಗಾಳದ ದಂಪತಿಯೊಂದು ಐಫೋನ್‌ ಖರೀದಿಸಲು ಸ್ವಂತ ಮಗುವನ್ನೇ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ರೀಲ್ಸ್‌ ಹುಚ್ಚಿಗೆ ಬಿದ್ದಿದ್ದ ದಂಪತಿ, ಐಫೋನ್‌ 14 ಪ್ರೋ ಖರೀದಿಸಲು ಮಗುವನ್ನು ಮಾರಾಟ ಮಾಡಿದ್ದು, ಈ ಹೃದಯ ವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಪೊಲೀಸರು ತಾಯಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ತಂದೆ ಜಯದೇವ್ ಘೋಷ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪೊಲೀಸ್‌ ಅಧಿಕಾರಿಗಳು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಎಂಟು ತಿಂಗಳ ಮಗು ನಾಪತ್ತೆಯಾಗಿ ದಿನಗಳು ಕಳೆದಿದ್ದರೂ ಆರಾಮವಾಗಿದ್ದ ಘೋಷ್ ದಂಪತಿಯ ವಿಚಿತ್ರ ನಡವಳಿಕೆ ಕಂಡು ನೆರೆಹೊರೆಯವರಿಗೆ ಅನುಮಾನ ಬಂದಿತ್ತು. ಅಲ್ಲದೇ ಹಿಂದೆ ಆರ್ಥಿಕ ತೊಂದರೆಗಳನ್ನು ಹೊಂದಿದ್ದ ಅವರ ಬಳಿ ಏಕಾಏಕಿ ಲಕ್ಷ ಬೆಲೆಯ ಫೋನ್‌ ಕಂಡು ಗುಮಾನಿಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಾಯಿಯನ್ನು ವಿಚಾರಿಸಿದಾಗ ಐಫೋನ್ ಖರೀದಿಸಲು ತಮ್ಮ ಮಗುವನ್ನು ಪತಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ತಮ್ಮ ಸಣ್ಣ ಮಗುವನ್ನು ಮಾರಾಟ ಮಾಡುವ ಮೊದಲು, ಆತ ತನ್ನ ಏಳು ವರ್ಷದ ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ. ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಗುವನ್ನು ಖರೀದಿಸಿದ ಮಹಿಳೆ ವಿರುದ್ಧವೂ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ