ಏನಾಯ್ತು ಸುಂದರಿ ಉರ್ಫಿ ಜಾವೇದ್ ಮುಖಕ್ಕೆ?: ಹೀಗೇಕೆ ಊದಿಕೊಂಡಿತು ಮುಖ?

ಚಿತ್ರ ವಿಚಿತ್ರ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚರ್ಚೆಯಲ್ಲಿರುತ್ತಿದ್ದ ಬಾಲಿವುಡ್ ನಟಿ ಉರ್ಫಿ ಜಾವೇದ್ (Uorfi Javed )ಇದೀಗ ಇದ್ದಕ್ಕಿದ್ದಂತೆ ಶೇರ್ ಮಾಡಿಕೊಂಡಿರು ವಿಡಿಯೋವೊಂದು ವೀಕ್ಷಕರನ್ನು ಆಘಾತಕ್ಕೊಳಗಾಗುವಂತೆ ಮಾಡಿದೆ. ಇಷ್ಟೊಂದು ಸುಂದರವಾಗಿ ಕಾಣಿಸುತ್ತಿದ್ದ ಉರ್ಫಿ ಜಾವೇದ್ ಗೆ ಏನಾಯ್ತು, ಅವರ ಮುಖ ಏಕೆ ಊದಿಕೊಂಡಿದೆ ಎಂದು ಜನರು ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಉರ್ಫಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ತುಟಿಗಳು ಊದಿಕೊಂಡಿವೆ. ತುಟಿ ಚೆನ್ನಾಗಿ ಕಾಣಲು ಅವರು ಸೌದರ್ಯ ವರ್ಧಕ ಚಿಕಿತ್ಸೆಯನ್ನು ಪಡೆಯುತ್ತಿರುವುದರಿಂದ ಅವರ ತುಟಿ ಊದಿಕೊಂಡಿದೆ. ಉರ್ಫಿಯ ಗುರುತೇ ಸಿಗದಷ್ಟು ಆಕೆ ವಿರೂಪಗೊಂಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅವರು, ತಾನು ಲಿಪ್ ಫಿಲ್ಲರ್ ಚಿಕಿತ್ಸೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. 18 ವರ್ಷಗಳಿಂದಲೂ ಈ ಚಿಕಿತ್ಸೆ ಪಡೆಯಬೇಕು ಎಂದಿದ್ದೆ, ಆದರೆ, ಆಗ ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ, ನನ್ನ ತುಟಿಗಳು ತುಂಬಾ ತೆಳ್ಳಗಿದ್ದವು. ನನಗೆ ದೊಡ್ಡದಾದ ಪೂರ್ಣ ತುಟಿಗಳು ಬೇಕಾಗಿದ್ದವು ಎಂದು ಹೇಳಿದ್ದಾರೆ.
ಲಿಪ್ ಫಿಲ್ಲರ್ ಒಳ್ಳೆಯದೋ ಕೆಟ್ಟದೋ ಎನ್ನುವುದಕ್ಕಿಂತ ಉತ್ತಮ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಬೇಕು. ಈ ಚಿಕಿತ್ಸೆಯಲ್ಲಿ ತುಟಿಗಳ ಮೇಲೆ ಇಂಜೆಕ್ಷನ್ ನೀಡುವುದರಿಂದ ತೀವ್ರ ನೋವು ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಸೋಂಕು ಬ್ಯಾಕ್ಟೀರಿಯಾ, ಶೀಲೀಂದ್ರಗಳು ಸೋಕದಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಅಲ್ಲದೇ ಚಿಕಿತ್ಸೆ ಪೂರ್ಣಗೊಂಡ ನಂತರ ಹಿಂದಿನಂತೆ ಮುಖ ಸಹಜ ಸ್ಥಿತಿಗೆ ಬರುತ್ತದೆ ಎಂದಿದ್ದಾರೆ.
ಅಂದ ಹಾಗೆ ಲಿಪ್ ಫಿಲ್ಲರ್ ಚಿಕಿತ್ಸೆಗೆ ಭಾರತದಲ್ಲಿ 18 ಸಾವಿರದಿಂದ 40 ಸಾವಿರ ರೂಪಾಯಿಗಳ ವರೆಗೆ ಇರಬಹುದಂತೆ, ಒಂದು ಚಿಕಿತ್ಸಾಲಯಕ್ಕಿಂತ ಮತ್ತೊಂದು ಚಿಕಿತ್ಸಾಲಯದಲ್ಲಿ ದರ ಬದಲಾವಣೆ ಇರಬಹುದಂತೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: