ಕೊರೊನಾ ವೈರಸ್ ನಿಂದ ಮೃತಪಟ್ಟ ವ್ಯಕ್ತಿಯ ದೇಹದೊಳಗೆ ಏನೇನು ನಡೆಯುತ್ತದೆ? | ಮರಣೋತ್ತರ ಪರೀಕ್ಷೆಯಿಂದ ಬಯಲಾಯಿತು ಆಘಾತಕಾರಿ ಅಂಶ - Mahanayaka
6:21 AM Thursday 16 - October 2025

ಕೊರೊನಾ ವೈರಸ್ ನಿಂದ ಮೃತಪಟ್ಟ ವ್ಯಕ್ತಿಯ ದೇಹದೊಳಗೆ ಏನೇನು ನಡೆಯುತ್ತದೆ? | ಮರಣೋತ್ತರ ಪರೀಕ್ಷೆಯಿಂದ ಬಯಲಾಯಿತು ಆಘಾತಕಾರಿ ಅಂಶ

23/10/2020

ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ದೇಹದಲ್ಲಿ ಏನೇನು ನಡೆಯುತ್ತದೆ ಎನ್ನುವ ವಿಚಾರಗಳು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಇದೊಂದು ಆಘಾತಕಾರಿ ಮಾಹಿತಿಯೂ ಹೌದು. ಸದ್ಯ ಕೊರೊನಾ ವೈರಸ್ ಎನ್ನುವುದು ದೊಡ್ಡ ವಿಚಾರವೇ ಅಲ್ಲ, ಒಂದು ಕಷಾಯದಲ್ಲಿ ಗುಣವಾಗುವ ಕಾಯಿಲೆ ಎಂದೆಲ್ಲ ಹೇಳುವಂತಹದ್ದು ಸಾಮಾನ್ಯವಾಗಿದೆ. ಆದರೆ, ನಿಜವಾಗಿಯೂ ಕೊರೊನಾ ಎಷ್ಟು ಅಪಾಯಕಾರಿ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.


Provided by

ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಯ ದೇಹದಲ್ಲಿ 18 ಗಂಟೆಗಳ ಕಾಲ ಕೊರೊನಾ ಜೀವಂತವಾಗಿರುತ್ತದೆ. ಈ ವೈರಸ್ ಮಾನವನ ದೇಹಕ್ಕೆ  ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿರುತ್ತಂತೆ. ಇದು ಶ್ವಾಸಕೋಶಕ್ಕೆ ಪ್ರವೇಶಿಸಿದ ಬಳಿಕ ಶ್ವಾಸಕೋಶದ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯನ್ನು ತಡೆಯುತ್ತದೆ.  ಆರೋಗ್ಯವಂತ ಶ್ವಾಸಕೋಶ ಮೃಧುವಾಗಿರುತ್ತದೆ. ಆದರೆ ಕೊರೊನಾ ಶ್ವಾಸಕೋಶವನ್ನು ವ್ಯಾಪಿಸಿದ ಬಳಿಕ ಶ್ವಾಸಕೋಶ ಕಾರ್ಕ್ ಬಾಲ್ ನಂತೆ ಗಟ್ಟಿಯಾಗುತ್ತದೆ ಎಂದು ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.

ಕೋವಿಡ್ ನಿಂದ ಮೃತಪಟ್ಟಿದ್ದ 62 ವರ್ಷದ ವ್ಯಕ್ತಿಯೊಬ್ಬರ ಕುಟುಂಬ ಸದಸ್ಯರ ಸಮ್ಮತಿ ಪಡೆದ ದಿನೇಶ್ ರಾವ್ ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜಿನ ಪ್ರಯೋಗಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವ್ಯಕ್ತಿಯ ಗಂಟಲು, ಮೂಗು, ಶ್ವಾಸನಾಳ, ಚರ್ಮದ ಮೇಲಿನ ಮಾದರಿಗಳನ್ನು 18 ಗಂಟೆಗಳ ನಂತರ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಮೂಗಿನ ದ್ರವ, ಗಂಟಲು ದ್ರವದ ಮಾದರಿಗಳಲ್ಲಿ ವೈರಸ್ ಕಂಡುಬಂದಿವೆ. ಶ್ವಾಸಕೋಶದ ಗಾಳಿ ಚೀಲಕ್ಕೆ ಹಾನಿಯಾಗಿದ್ದು ರಕ್ತನಾಳದಲ್ಲಿ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಹೃದಯಕ್ಕೆ ಕೂಡ ಹಾನಿಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ