ಏನಂದ್ರು ಗಿರೀಶ್ ಮಟ್ಟನವರ್?: ಸಮೀರ್, ಕುಡ್ಲರಾಂಪೇಜ್ ಯೂಟ್ಯೂಬ್ ಲೈವ್

ಮಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಸೌಜನ್ಯ ಪರ ಹೋರಾಟಗಾರರು, ಯೂಟ್ಯೂಬ್ ಲೈವ್ ನಲ್ಲಿ ಮಾತನಾಡಿದ್ದು, ಹಲವು ವರ್ಷಗಳ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ಸೌಜನ್ಯ ಪರ ಹೋರಾಟಗಾರರ ತಂಡದ ಮುಂದಾಳು, ಗಿರೀಶ್ ಮಟ್ಟನವರ್ ಲೈವ್ ನಲ್ಲಿ ಮಾತನಾಡುತ್ತಾ, ಈ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ತಿಳಿಸಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಪ್ರಕರಣಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಮೊದಲ ಬಾರಿಗೆ ತಿಳಿಯುತ್ತಿರುವುದಲ್ಲ, ಈ ಹಿಂದೆ ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿತ್ತು. ಆದರೆ ರಾಮಕೃಷ್ಣ ಹೆಗಡೆ ತೆಗೆದುಕೊಳ್ಳದ ನಿರ್ಣಯವನ್ನು ಸಿದ್ದರಾಮಯ್ಯನವರು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಆದೇಶದ ಹಿಂದೆ ಯೂಟ್ಯೂಬ್ ರೆವೆಲ್ಯೂಷನ್ ಇದೆ. ಯೂಟ್ಯೂಬ್ ತಂದ ರೆವೆಲ್ಯೂಷನ್ ಒಂದು ದಿನ ಜಗತ್ತು ನೋಡುತ್ತದೆ ಎಂದು ನಾನು ಹೇಳಿದ್ದೆ. ಯೂಟ್ಯೂಬರ್ಸ್ ಗೆ ಆಮಿಷ, ಬೆದರಿಕೆಗಳೂ ಬಂದಿದ್ದವು. ಅವೆಲ್ಲವನ್ನೂ ಮೆಟ್ಟಿನಿಂತ ಪರಿಣಾಮ ಈ ಹಂತಕ್ಕೆ ಪ್ರಕರಣ ಮುಟ್ಟಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್, ಕುಡ್ಲ ರಾಂಪೇಜ್, ಮತ್ತೊಬ್ಬರು ಯೂಟ್ಯೂಬರ್ ಜೊತೆಗಿದ್ದರು. ಈ ಯೂಟ್ಯೂಬ್ ಲೈವ್ ನಲ್ಲಿ ಏನೆಲ್ಲ ವಿಚಾರಗಳನ್ನು ಯೂಟ್ಯೂಬರ್ಸ್ ಪ್ರಸ್ತಾಪಿಸಿದರು, ಎನ್ನುವುದನ್ನು ಕೆಳಗೆ ನೀಡಿರುವ ವಿಡಿಯೋಗೆ ಕ್ಲಿಕ್ ಮಾಡಿ ತಿಳಿಯಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: