ಒಡಿಶಾ ರೈಲು ದುರಂತದಲ್ಲಿ ರೈಲು ಚಾಲಕರ ಸ್ಥಿತಿ ಏನಾಗಿದೆ ಗೊತ್ತಾ? - Mahanayaka
12:13 AM Saturday 23 - August 2025

ಒಡಿಶಾ ರೈಲು ದುರಂತದಲ್ಲಿ ರೈಲು ಚಾಲಕರ ಸ್ಥಿತಿ ಏನಾಗಿದೆ ಗೊತ್ತಾ?

odisha
05/06/2023


Provided by

ಭುವನೇಶ್ವರ: ಬಾಲೇಶ್ವರ ಜಿಲ್ಲೆಯಲ್ಲಿ ಸಂಭವಿಸಿದ ಮೂರು ರೈಲುಗಳ ಭೀಕರ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದು ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರೈಲು ಚಾಲಕ(ಲೋಕೋ ಪೈಲಟ್)ರ ಸ್ಥಿತಿ ಏನಾಗಿದೆ ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿದ್ದವು. ಇದೀಗ ರೈಲು ಚಾಲಕರ ಸ್ಥಿತಿಯ ಬಗ್ಗೆ ತಿಳಿದು ಬಂದಿದೆ.

ಭೀಕರ ಅಪಘಾತದದಲ್ಲಿ ಬದುಕುಳಿದ ಕೋರೊಮಂಡಲ್‌ ರೈಲು ಎಂಜಿನ್‌ ಚಾಲಕ ಗುಣನಿಧಿ ಮೊಹಂತಿ ಮತ್ತು ಅವರ ಸಹ ಚಾಲಕ ಹಜಾರಿ ಬೆಹರಾ ಅವರ ಆರೋಗ್ಯ ಸ್ಥಿರವಾಗಿದೆ. ಬಹನಾಗಾ ಬಜಾರ್‌ ನಿಲ್ದಾಣದ ಸಮೀಪ ಅಪಘಾತಕ್ಕೀಡಾಗಿ ಹಳಿ ತಪ್ಪಿದ ಕೋರೊಮಂಡಲ್‌ ರೈಲಿನಲ್ಲಿ ಗಾಯಗೊಂಡಿದ್ದ ಈ ಇಬ್ಬರು ರಕ್ಷಿಸಲಾಗಿತ್ತು. ಈ ಇಬ್ಬರೂ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಚಾಲಕರಿಬ್ಬರ ಆರೋಗ್ಯ ಸ್ಥಿರವಾಗಿದೆ. ಮೊಹಂತಿ ಅವರನ್ನು ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ತಲೆಗೆ ಪೆಟ್ಟುಬಿದ್ದಿರುವ ಬೆಹರಾ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಬೇಕಿದೆ’ ಎಂದು ಆಗ್ನೇಯ ರೈಲ್ವೆ (ಎಸ್‌ಇಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಚೌಧರಿ ತಿಳಿಸಿದ್ದಾರೆ.

ನಿಯಮಗಳ ಪ್ರಕಾರವೇ ಲೊಕೋಮೋಟಿವ್ ಕಾರ್ಯಾಚರಣೆ ನಡೆಸಿದ ಕಾರಣ ರೈಲಿನ ಚಾಲಕರದ್ದು ಯಾವುದೇ ತಪ್ಪಿಲ್ಲವೆಂದು ಈಗಾಗಲೇ ರೈಲ್ವೆ ಇಲಾಖೆ ಇಬ್ಬರು ಚಾಲಕರಿಗೂ ಕ್ಲೀನ್ ಚಿಟ್ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ