ಸುಳ್ಳು ಸುದ್ದಿಗಳನ್ನು ಸರ್ಕಾರವೇ ನಿಯಂತ್ರಿಸಬೇಕು | ಕೇಂದ್ರ ಸರ್ಕಾರಕ್ಕೆ ಸು.ಕೋರ್ಟ್ ಖಡಕ್ ವಾರ್ನಿಂಗ್ - Mahanayaka
3:04 PM Thursday 18 - September 2025

ಸುಳ್ಳು ಸುದ್ದಿಗಳನ್ನು ಸರ್ಕಾರವೇ ನಿಯಂತ್ರಿಸಬೇಕು | ಕೇಂದ್ರ ಸರ್ಕಾರಕ್ಕೆ ಸು.ಕೋರ್ಟ್ ಖಡಕ್ ವಾರ್ನಿಂಗ್

18/11/2020

ನವದೆಹಲಿ: ಸುದ್ದಿವಾಹಿನಿ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ತಡೆಗೆ ಕೇಂದ್ರ ಸರ್ಕಾಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ.  ಈ ಹಿಂದಿನ ಆದೇಶದಲ್ಲಿ ಸುಪ್ರೀಂ ಕೊರ್ಟ್, ಸುದ್ದಿವಾಹಿನಿಗಳಲ್ಲಿ ಸುಳ್ಳುಸುದ್ದಿಗಳನ್ನು ತಡೆಯಲು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆ ಅಡಿ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿತ್ತು.


Provided by

 ತಬ್ಲೀಗ್‌ ಜಮಾತ್‌ನಿಂದ ಕೋವಿಡ್‌ ಹರಡಿತು ಎಂದು ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠ ವಿಚಾರಣೆ ನಡೆಸಿ, ಈ ಸೂಚನೆ ನೀಡಿತ್ತು.

ಮಂಗಳವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಈ ಸಂಬಂಧ ಪ್ರಮಾಣಪತ್ರವನ್ನು ಸಲ್ಲಿಸಿತ್ತು. ಸುದ್ದಿವಾಹಿನಿಗಳ ಮೇಲೆ ಸಾರಾಸಗಟಾಗಿ ನಿಷೇಧ ಹೇರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ (ಎನ್‌ಬಿಸಿಎ) ಇದೆ’ ಎಂದು ಸರ್ಕಾರವು ತನ್ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿತ್ತು.

ಆದರೆ ಈ ಉತ್ತರಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಬಲ್ ಟಿ.ವಿ. ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಪ್ರಶ್ನಿಸಿದ್ದೆವು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ ಎಂದು ಹೇಳಿದೆ.

ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೇ ಇದ್ದರೆ, ಒಂದು ವ್ಯವಸ್ಥೆಯನ್ನು ರೂಪಿಸಿ. ಸುಳ್ಳು ಸುದ್ದಿಗೆ ತಡೆ ಒಡ್ಡುವ ಅಧಿಕಾರ ಸರ್ಕಾರಕ್ಕೆ ಇರುವಾಗ, ಎನ್‌ ಬಿಎಸ್‌ ಎಯಂತಹ ಹೊರಗಿನ ಸಂಸ್ಥೆಗೆ ಏಕೆ ನಿಯಂತ್ರಣದ ಜವಾಬ್ದಾರಿ ವಹಿಸಬೇಕು ಎಂದು ಪೀಠವು ಪ್ರಶ್ನಿಸಿತು.ಈ ಕಾಯ್ದೆ ಅಡಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಮೆಹ್ತಾ ಉತ್ತರಿಸಿದರು. ಹಾಗಿದ್ದರೆ ಆ ಕಾಯ್ದೆ ಅಡಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ. ದೂರುಗಳು ಬಂದಿದ್ದರೆ, ಅವುಗಳನ್ನು ಬಗೆಹರಿಸಲು ಈವರೆಗೆ ಏಕೆ ವ್ಯವಸ್ಥೆ ರೂಪಿಸಿಲ್ಲ ಎಂದು ಪೀಠ ಪ್ರಶ್ನಿಸಿದೆ.

ಇತ್ತೀಚಿನ ಸುದ್ದಿ