ವಾಟ್ಸಾಪ್ ಬಳಕೆದಾರರಿಗೆ ಕೊನೆಗೂ ಸಿಕ್ಕಿತು ಗುಡ್ ನ್ಯೂಸ್ - Mahanayaka

ವಾಟ್ಸಾಪ್ ಬಳಕೆದಾರರಿಗೆ ಕೊನೆಗೂ ಸಿಕ್ಕಿತು ಗುಡ್ ನ್ಯೂಸ್

whatsapp users
30/05/2021


Provided by

ನವದೆಹಲಿ:  ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿರುವ ವಾಟ್ಸಾಪ್,  ಹೊಸ ಖಾಸಗಿ ನೀತಿಗಳನ್ನು ಒಪ್ಪಿಕೊಳ್ಳದ ಬಳಕೆದಾರರ  ಸೇವೆಯನ್ನೂ ಮುಂದುವರಿಸಲಾಗುವುದು ಎಂದು ಹೇಳಿದೆ.

 ಖಾಸಗಿ ನೀತಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಬಳಕೆದಾರರ ಅಕೌಂಟ್ ಕಾರ್ಯನಿರ್ಬವಹಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಾಪ್ ಇದೀಗ ಖಾಸಗಿ ನೀತಿ ಕಡ್ಡಾಯವಲ್ಲ. ಹೊಸ ಖಾಸಗಿ ನೀತಿಯನ್ನು ಒಪ್ಪಿಕೊಳ್ಳದ ಯಾವುದೇ ಬಳಕೆದಾರರ ಅಪ್ಲಿಕೇಶನಲ್ಲಿ ಯಾವುದೇ ಫೀಚರ್ ಕಡಿತಗೊಳಿಸಿದೇ ಸೇವೆ ಮುಂದುವರಿಸಲಾಗುವುದು ಎಂದು ಹೇಳಿದೆ.

ಸಂಸ್ಥೆಯ ಖಾಸಗಿ ನಿಯಮಗಳನ್ನು ಒಪ್ಪಿಕೊಳ್ಳದವರನ್ನು ಕ್ರಮೇಣ ನಿರ್ಬಂಧಿಸಲಾಗುವುದು ಎನ್ನುವ ಸುದ್ದಿಗಳು ಹರಡಿದ್ದವು. ಇದರ ಬೆನ್ನಲ್ಲೇ ಇದೀಗ, ವಾಟ್ಸಾಪ್ ಕಾರ್ಯನಿರ್ವಹಿಸುತ್ತಿರುವ ರೀತಿಯಲ್ಲೇ ಬಳಕೆ ಮಾಡುವ ಅವಕಾಶವನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿರುವುದಾಗಿ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ