ಬೆಂಗಳೂರಿನಲ್ಲಿ ಆಸ್ಪತ್ರೆ ಬೆಡ್, ಮೆಡಿಕಲ್ ಆಕ್ಸಿಜನ್ ಸಿಲಿಂಡರ್, ರೆಮ್‌ಡೆಸಿವಿರ್  ಇಂಜೆಕ್ಷನ್ ಎಲ್ಲಿ ಸಿಗುತ್ತದೆ ಎಂದು ಪತ್ತೆ ಮಾಡುವುದು ಹೇಗೆ? - Mahanayaka

ಬೆಂಗಳೂರಿನಲ್ಲಿ ಆಸ್ಪತ್ರೆ ಬೆಡ್, ಮೆಡಿಕಲ್ ಆಕ್ಸಿಜನ್ ಸಿಲಿಂಡರ್, ರೆಮ್‌ಡೆಸಿವಿರ್  ಇಂಜೆಕ್ಷನ್ ಎಲ್ಲಿ ಸಿಗುತ್ತದೆ ಎಂದು ಪತ್ತೆ ಮಾಡುವುದು ಹೇಗೆ?

covid 19
18/04/2021

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಕರಣ ಮಿತಿ ಮೀರಿದೆ. ಕೊರೊನಾ ಹಿನ್ನೆಲೆಯಲ್ಲಿ ಜನರು ಆತಂಕಕ್ಕೊಳಗಾಗದೇ ಆಸ್ಪತ್ರೆ ಹಾಗೂ ವೈದ್ಯಕೀಯ ಮಾಹಿತಿಗಳನ್ನು ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಸಾರ್ವಜನಿಕರು ಬೆಂಗಳೂರಿನಲ್ಲಿ ಯಾವುದೇ ಮೂಲೆಯಲ್ಲಿ ಯಾವ ಆಸ್ಪತ್ರೆಯಲ್ಲಿ ಬೆಡ್ ಇದೆ. ಮೆಡಿಕಲ್ ಆಕ್ಸಿಜನ್ ಸಿಲಿಂಡರ್, ರೆಮ್‌ಡೆಸಿವಿರ್  ಇಂಜೆಕ್ಷನ್ ಸಿಗುತ್ತದೆ ಎಂಬ ವಿವರಗಳನ್ನು ಪಡೆದುಕೊಳ್ಳಲು ಬಿಬಿಎಂಪಿ ವ್ಯವಸ್ಥೆ ಮಾಡಿದೆ.

bmpgov.com/chbms ಈ ವೆಬ್ ಸೈಟ್ ಲಿಂಕ್ ಗೆ ಸಾರ್ವಜನಿಕರು ಕ್ಲಿಕ್ ಮಾಡುವ ಮೂಲಕ ಕೊವಿಡ್ ಸಂಬಂಧಿತ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಕೊವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿರುವುದರಿಂದ ಕೊರೊನಾ ಸಂಬಂಧ ಮಾಹಿತಿ ತಿಳಿಯದವರಿಗೆ ಸಾರ್ವಜನಿಕರೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಇತ್ತೀಚಿನ ಸುದ್ದಿ