ಮಸೀದಿ ಆಯ್ತು ಇದೀಗ ಕ್ರೈಸ್ತರ ಮೇಲೆ ಕೆಂಗಣ್ಣು: ಕ್ರೈಸ್ತರ ಪ್ರಾರ್ಥನಾ ಸಭೆಯ ಮೇಲೆ ದುಷ್ಕರ್ಮಿಗಳ ದಾಳಿ - Mahanayaka

ಮಸೀದಿ ಆಯ್ತು ಇದೀಗ ಕ್ರೈಸ್ತರ ಮೇಲೆ ಕೆಂಗಣ್ಣು: ಕ್ರೈಸ್ತರ ಪ್ರಾರ್ಥನಾ ಸಭೆಯ ಮೇಲೆ ದುಷ್ಕರ್ಮಿಗಳ ದಾಳಿ

17/07/2024


Provided by

ಸಂಘ ಪರಿವಾರದ ದಾಂಧಲೆ ಮುಂದುವರಿದಿದೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮಸೀದಿಯ ಮೇಲೆ ಹತ್ತಿ ಅದನ್ನು ಒಡೆಯುತ್ತಿದ್ದ ಘಟನೆ ನಡೆದಿತ್ತು. ಇದೀಗ ಉತ್ತರಾಖಂಡದಲ್ಲಿ ಕ್ರೈಸ್ತರ ವಿರುದ್ಧ ಇಂತಹದ್ದೇ ದಾಳಿ ನಡೆದಿದೆ. ಮನೆಯಲ್ಲಿ ನಡೆಯುತ್ತಿದ್ದ ಕ್ರೈಸ್ತರ ಪ್ರಾರ್ಥನಾ ಸಭೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪ್ರಾರ್ಥನಾ ಕೊಠಡಿ ಮತ್ತು ಬೆಡ್ರೂಮ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ಈ ಕುರಿತಂತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ದುಷ್ಕರ್ಮಿಗಳು ಕ್ರೈಸ್ತ ಧರ್ಮದ ಕುರಿತು ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಮತ್ತು ಬಲವಂತದ ಮತಾಂತರ ನಡೆಯುತ್ತಿದೆ ಎಂಬ ಆರೋಪವನ್ನು ಹೊರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಾರ್ಥನಾ ಸಭೆ ದೀಕ್ಷಾ ಪಾಲ್ ಎಂಬವರ ಮನೆಯಲ್ಲಿ ನಡೆಯುತ್ತಿತ್ತು. ದೀಕ್ಷಾ ಅವರ ಪತಿ ರಾಜೇಶ್ ಅವರು ಹರಿದ್ವಾರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮನೆಯವರ ಪ್ರಕಾರ ದೇವೇಂದ್ರ ದೋಬಾಲ್ ಎಂಬವ ಈ ಪ್ರತಿಭಟನೆಯ ನೇತೃತ್ವ ನೀಡಿದ್ದ. ಈ ವ್ಯಕ್ತಿಯ ಫೇಸ್ಬುಕ್ ಪ್ರೊಫೈಲ್ ನ ಪ್ರಕಾರ ಈತ ಮಾಜಿ ಸೈನಿಕ ಮತ್ತು ಆರ್ ಎಸ್ ಎಸ್ ಸದಸ್ಯನಾಗಿದ್ದಾನೆ ಎಂದು ಗೊತ್ತಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ