ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿ: ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿದ ಪತಿ! - Mahanayaka

ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿ: ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿದ ಪತಿ!

05/10/2025

ಲಕ್ನೋ:  ಪತ್ನಿ ಬೇರೊಬ್ಬನ ಜೊತೆಗೆ ಓಡಿ ಹೋದ ಬೆನ್ನಲ್ಲೇ ನೊಂದ ಪತಿ ತನ್ನ ನಾಲ್ವರು ಮಕ್ಕಳೊಂದಿಗೆ  ನದಿಗೆ ಹಾರಿದ ಘಟನೆ  ನಡೆದಿದೆ. ಇದಕ್ಕೂ ಮುನ್ನ ವ್ಯಕ್ತಿ ತನ್ನ ಸಹೋದರಿಗೆ  ವಿಡಿಯೋ ಸಂದೇಶ ಕಳುಹಿಸಿದ್ದಾನೆ.


Provided by

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪತಿ ಸಲ್ಮಾನ್ ತನ್ನ ಮಕ್ಕಳಾದ ಮೆಹೆಕ್ (12), ಶಿಫಾ (5), ಅಮನ್ (3) ಮತ್ತು ಎಂಟು ತಿಂಗಳ ಶಿಶು ಇನೈಶಾ ಜೊತೆಗೆ ನದಿಗೆ ಹಾರಿದ್ದಾರೆ. ತನ್ನ ಪತ್ನಿ ಖುಷ್ನುಮಾ ಮತ್ತು ಆಕೆಯ ಪ್ರಿಯಕರನೇ ಈ ಘಟನೆಗೆ ಕಾರಣ ಎಂದು ಸಲ್ಮಾನ್ ವಿಡಿಯೋ ಸಂದೇಶ ರವಾನಿಸಿದ್ದಾನೆ.

ಸಲ್ಮಾನ್ ಮತ್ತು ಖುಷ್ನುಮಾ ಮದುವೆಯಾಗಿ 15 ವರ್ಷಗಳಾಗಿವೆ. ಈ ನಡುವೆ ಇಬ್ಬರ ನಡುವೆ ಗಲಾಟೆಗಳು ಹೆಚ್ಚಾಗಿತ್ತು. ಶುಕ್ರವಾರ ತೀವ್ರ ಗಲಾಟೆ ನಡೆದಿತ್ತು. ನಂತರ ಆಕೆ ತನ್ನ ಗೆಳೆಯನ ಜೊತೆಗೆ ಓಡಿಹೋಗಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದಾದ ನಂತರ ಸಲ್ಮಾನ್ ತನ್ನ ನಾಲ್ವರು ಮಕ್ಕಳನ್ನು ಯಮುನಾ ಸೇತುವೆಗೆ ಕರೆದುಕೊಂಡು ಹೋಗಿ ನದಿಗೆ ಹಾರಿರುವುದಾಗಿ ಹೇಳಲಾಗಿದೆ. ಸದ್ಯ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ