ಸಲಿಂಗಿ ಪತಿಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ‌ ಪತ್ನಿ - Mahanayaka
11:53 PM Friday 19 - December 2025

ಸಲಿಂಗಿ ಪತಿಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ‌ ಪತ್ನಿ

banglore
16/08/2023

ಬೆಂಗಳೂರು: ಹೆಂಡತಿಯೊಬ್ಬಳು ಸಲಿಂಗಿ ಪತಿಯ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. .ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಇದು ಕಂಡುಬಂದಿದೆ.

ಗಂಡ ದಿಗಂತ್‌ನಿಂದ ಮೋಸ ಹೋದ ಮಹಿಳೆ ಟೆಕ್ಕಿಯಾಗಿದ್ದಾರೆ. ಮಗನ ವಿಚಾರ ಗೊತ್ತಿದ್ದೂ ಆತನ ಪೋಷಕರು ಮದುವೆ ಮಾಡಿಸಿದ್ದರು. ಹೆಣ್ಣಿನ ಮನೆಯವರಿಂದ 160 ಗ್ರಾಂ ಚಿನ್ನಾಭರಣ ಹಾಗೂ ನಗದು ಪಡೆದು ಮಗ ಸಲಿಂಗಕಾಮಿ ಎನ್ನುವುದನ್ನು ಬಚ್ಚಿಟ್ಟು ಮದುವೆ ಮಾಡಿಸಿದ್ದರು. ಮದುವೆಯಾದಾಗಿನಿಂದ ಈತ ಲೈಂಗಿಕ ಸಂಪರ್ಕ ಮುಂದೂಡುತ್ತಲೇ ಇದ್ದ.ಮದುವೆಯಾದಾಗಿನಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ ಬಗ್ಗೆ ಅನುಮಾನಗೊಂಡು ವಾಟ್ಸಪ್‌ ಪರಿಶೀಲಿಸಿದಾಗ ಮಹಿಳೆಗೆ ಗಂಡನ ನಿಜ ಬಣ್ಣ ಬಯಲಾಗಿದೆ.ಪತಿಯ ನಡವಳಿಕೆ ಕಂಡು ಅನುಮಾನಗೊಂಡ ಟೆಕ್ಕಿ ಪತ್ನಿ ಆತನ ವಾಟ್ಸಪ್‌, ಮೆಸೆಂಜರ್‌ ಪರಿಶೀಲಿಸಿದ್ದಾಳೆ. ಈ ವೇಳೆ ಪತಿಯ ನಿಜ ಬಣ್ಣ ಬಯಲಾಗಿದೆ.

ವಾಟ್ಸಪ್‌ ನಲ್ಲಿ ತನ್ನ ಪತಿ ಪರಪುರುಷನ ಜೊತೆ ಅತಿ ಸಲುಗೆಯಿಂದಿದ್ದ ಫೋಟೋಗಳು ಪತ್ತೆಯಾಗಿವೆ. ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೋಟೋಗಳು ಕಂಡುಬಂದಿವೆ. ಇದರಿಂದ ನೊಂದ ಮಹಿಳೆ ಪತಿಯನ್ನ ಪ್ರಶ್ನೆ ಮಾಡಿದ್ದಳು. ಈ ವೇಳೆ ಪತ್ನಿ ಮೇಲೆ ಸಲಿಂಗಿ ದಿಗಂತ್ ಹಲ್ಲೆ ನಡೆಸಿದ್ದ. ಪತಿಯ ಪೋಷಕರಿಗೆ ಹೇಳಿದಾಗ, ಅನುಸರಿಸಿಕೊಂಡು ಹೋಗು ಎಂದು ಸುಮ್ಮನಾಗುತ್ತಿದ್ದರು. ಇದರಿಂದ ಬೇಸತ್ತು ಟೆಕ್ಕಿ ಮಹಿಳೆ ಸದ್ಯ ಪತಿ ದಿಗಂತ್ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿ