ದಾರಿ ತಪ್ಪಿ ನಾಡಿಗೆ ಬಂದ ಕಾಡಾನೆ: ನೇತ್ರಾವತಿ ನದಿ ಬದಿಯಲ್ಲಿ ವಿಹಾರ

ಉಪ್ಪಿನಂಗಡಿ: ಕಾಡಿನ ದಾರಿ ತಪ್ಪಿದ ಒಂಟಿ ಸಲಗವೊಂದು ನಾಡಿಗೆ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೊಗ್ರು, ಬೆದ್ರೋಡಿ, ನೀರಕಟ್ಟೆ ಪ್ರದೇಶದಲ್ಲಿ ನಡೆದಿದೆ.
ನೇತ್ರಾವತಿ ನದಿ ಬದಿಯಲ್ಲಿ ವಿಹರಿಸಿದ ಕಾಡಾನೆ ಬೆದ್ರೋಡಿ, ವಳಾಲು, ನೀರಕಟ್ಟೆ ಪರಿಸರದಲ್ಲಿ ಸಂಚರಿಸಿತ್ತು. ಬಿಸಿಲಿನ ತಾಪಮಾನದಲ್ಲಿ ದೇಹವನ್ನು ತಣಿಸಲು ಸೊಂಡಿಲಿಂದ ಮೈಮೇಲೆ ನೀರು ಸಿಂಪಡಿಸುತ್ತಾ ಆನೆ ಮುಂದೆ ಸಾಗಿತ್ತು.
ಕಾಡಾನೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ, ಪಂಪ್ ಶೆಡ್ ಹಾಗೂ ಕೆಲವು ಬಾಳೆ ಗಿಡಗಳು ಹಾನಿಯಾಗಿರುವುದು ಬಿಟ್ಟರೆ ಆನೆ ಯಾರಿಗೂ ಯಾವುದೇ ತೊಂದರೆ ಮಾಡಿಲ್ಲ ಎನ್ನಲಾಗಿದೆ.
ಕಾಡಿಗೆ ಹೋಗುವ ದಾರಿ ತಿಳಿಯದೇ ಕಾಡಾನೆ ಊರಿನತ್ತ ಹೆಜ್ಜೆ ಹಾಕಿತ್ತು. ಸಂಜೆ ವೇಳೆ ನೀರಕಟ್ಟೆಯಿಂದ ವಳಾಲಿನತ್ತ ತೆರಳಿದ್ದ ಆನೆ ರಾತ್ರಿ ವೇಳೆ ಕಾಡಿಗೆ ತೆರಳಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth