ರಾಮಮಂದಿರ ಆಯ್ತು, ಸೀತಾಮಂದಿರದ ಹಿಂದೆ ಹೋದ ಬಿಜೆಪಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದೇನು..?

ರಾಮ ಮಂದಿರವು ಓಟ್ ಆಗಿ ಪರಿವರ್ತಿತವಾಗುತ್ತಿಲ್ಲ ಎಂಬುದನ್ನು ಅರಿತುಕೊಂಡಿರುವ ಬಿಜೆಪಿಯು ಇದೀಗ ಸೀತಾಮಂದಿರ ಕಟ್ಟಿಕೊಡುವ ಹೊಸ ಭರವಸೆಯನ್ನು ನೀಡಿದೆ. ಬಿಹಾರದ ಸೀತಾಮಹರಿಯಲ್ಲಿ ಸೀತಾಮಾತೆಯ ಮಂದಿರವನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದಾರೆ.
ರಾಮ ಮಂದಿರ ಆಯ್ತು,, ಇನ್ನು ಸೀತಾ ಮಾತೆಯ ಮಂದಿರವನ್ನು ನಿರ್ಮಾಣ ಮಾಡುತ್ತೇವೆ. ನಾವು ವೋಟ್ ಬ್ಯಾಂಕಿಗೆ ಹೆದರುವುದಿಲ್ಲ. ಅಯೋಧ್ಯೆಯಲ್ಲಿ ರಾಮಲಲ್ಲ ಮಂದಿರವನ್ನು ನಿರ್ಮಿಸಿದ ಪ್ರಧಾನಿ ಮೋದಿಗೆ ಈಗ ಉಳಿದಿರುವ ಕೆಲಸವೆಂದರೆ ಮಾ ಸೀತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನು ನಿರ್ಮಿಸುವುದು. ರಾಮನನ್ನು ಮಂದಿರದಿಂದ ಹಾಗೂ ಆತನ ಜನ್ಮಸ್ಥಳದಿಂದ ದೂರವಿಟ್ಟರು. ಆದರೆ ಸೀತೆಯನ್ನು ಆಕೆಯ ಜನ್ಮಸ್ಥಳದಿಂದ ದೂರವಿರಲು ಬಿಡುವುದಿಲ್ಲ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth