ಇವಿಎಂ ಹ್ಯಾಕಿಂಗ್ ಆರೋಪ: ನಾವು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದ ಆದಿತ್ಯ ಠಾಕ್ರೆ

ಮಹಾರಾಷ್ಟ್ರದ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ ಹ್ಯಾಕಿಂಗ್ ಆರೋಪ ಮಾಡಲಾಗುತ್ತಿದ್ದು ರಾಜಕೀಯ ಗದ್ದಲ ಆರಂಭವಾಗಿದೆ. ಈ ಕ್ಷೇತ್ರದ ಫಲಿತಾಂಶವನ್ನು ನಮ್ಮ ಪಕ್ಷವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.
ಮುಂಬೈಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ, “ಅಧಿಕೃತ ಇವಿಎಂ ಯಂತ್ರದ ದುರ್ಬಳಕೆ ಮಾಡಿಕೊಂಡು ನಮ್ಮ ಶಿವಸೇನೆ ಅಭ್ಯರ್ಥಿ ಅಮೋಲ್ ಕೀರ್ತಿಕರ್ ರ ಗೆಲುವನ್ನು ಹತ್ತಿಕ್ಕಲಾಗಿದೆ” ಎಂದು ಆರೋಪಿಸಿದರು.
“ಚುನಾವಣಾ ಆಯೋಗವು ‘ಸಂಪೂರ್ಣ ರಾಜಿ’ ಆಯೋಗ ಎಂದು ನಾನು ಈಗಾಗಲೇ ಹೇಳಿದ್ದೇನೆ”
“ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಬಿಜೆಪಿ 40 ಸ್ಥಾನಗಳನ್ನು ಕೂಡ ಗೆಲ್ಲುತ್ತಿರಲಿಲ್ಲ. 243 ಸ್ಥಾನಗಳನ್ನು ಅವರು ಚುನಾವಣಾ ಪ್ರಕ್ರಿಯೆಯಲ್ಲಿನ ದುರ್ವ್ಯವಹಾರದಿಂದ ಗೆದ್ದಿದ್ದಾರೆ” ಎಂದು ಆದಿತ್ಯ ಠಾಕ್ರೆ ಆರೋಪಿಸಿದರು.
ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ರವೀಂದ್ರ ವೈಕರ್ ಕೇವಲ 48 ಮತಗಳಿಂದ ಜಯಗಳಿಸಿದ್ದಾರೆ. ಜೂನ್ 4ರಂದು ಗೋರೆಗಾಂವ್‌ನ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ವೈಕರ್ ಅವರ ಸಂಬಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿಯಮಗಳ ಪ್ರಕಾರ, ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth