ಮಹೇಶ್ ಶೆಟ್ಟಿ ತಿಮರೋಡಿಗೆ ಬೇಲ್ ಸಿಗುತ್ತಾ?: ಸಂಪೂರ್ಣ ಮಾಹಿತಿ ನೀಡಿದ ವಕೀಲರು - Mahanayaka

ಮಹೇಶ್ ಶೆಟ್ಟಿ ತಿಮರೋಡಿಗೆ ಬೇಲ್ ಸಿಗುತ್ತಾ?: ಸಂಪೂರ್ಣ ಮಾಹಿತಿ ನೀಡಿದ ವಕೀಲರು

mahesh shetty timarodi
21/08/2025


Provided by

ಉಡುಪಿ: ಹಿಂದೂ ನಾಯಕ, ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಅಚ್ಚರಿ ಎಂಬಂತೆ ಏಕಾಏಕಿ ಬಂಧನಕ್ಕೊಳಗಾಗಿದ್ದಾರೆ. ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಸದ್ಯ ಆ.23ರವರೆಗೆ ಮಹೇಶ್ ಶೆಟ್ಟಿಯವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಘಟನೆಯ ಸಂಪೂರ್ಣ ವಿವರವನ್ನು ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು ನೀಡಿದ್ದಾರೆ.

ಇಂದು ಬೆಳಿಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಕಾರಿನ ಮೂಲಕವೇ ಬ್ರಹ್ಮಾವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಬಳಿಕ ಅವರ ಹೇಳಿಕೆಯನ್ನ ಪೊಲೀಸರು ಪಡೆದುಕೊಂಡಿದ್ದಾರೆ. ನಂತರ ಅವರಿಗೆ  ಬ್ರಹ್ಮಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ನಡೆಯಿತು. ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿಗೆ ಬಿಪಿ ಹೈ ಇದ್ದುದರಿಂದ ಅವರಿಗೆ ಮೆಡಿಸಿನ್ ನೀಡಲಾಯಿತು ಎಂದು ವಕೀಲರು ತಿಳಿಸಿದರು.

ಇನ್ನೂ ಮಹೇಶ್ ಶೆಟ್ಟಿ ಪರ ಬೇಲ್ ಅಪ್ಲಿಕೇಶನ್ ಮೂವ್ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ ತೀರ್ಪನ್ನು  ಅರ್ಜಿಯಲ್ಲಿ ಉಲ್ಲೇಖಿಸಿದ್ದೇನೆ. ಜೊತೆಗೆ  ಅವರನ್ನು ಯಾವ ಕಾರಣಕ್ಕಾಗಿ ಪೊಲೀಸರ ಬಂಧನ ಮಾಡಿದ್ದಾರೆ ಎಂಬ ಬಗ್ಗೆ ಕೂಡ ಪ್ರಶ್ನೆಯನ್ನು ಎತ್ತಿದ್ದೇನೆ, ಈ ಅಫೆನ್ಸ್ ಗೆ ಶಿಕ್ಷೆ ಇರುವುದು ಕೇವಲ 3 ವರ್ಷ ಮಾತ್ರ, ಜಡ್ಜ್ ಮೆಂಟ್ ನಲ್ಲಿ ಸುಪ್ರೀಂ ಕೋರ್ಟ್ ಕ್ಲೀಯರ್ ಆಗಿ ಹೇಳಿದೆ.  7 ವರ್ಷಗಳವರೆಗೆ ಶಿಕ್ಷೆ ಇರುವ ಪ್ರಕರಣಗಳಲ್ಲಿ ಮಾತ್ರವೇ ಬಂಧನ ಮಾಡಬೇಕು ಅಂತ, ಕೋರ್ಟ್ ನ್ನು ಕನ್ವಿನ್ಸ್ ಮಾಡಿದ್ದೇವೆ ಎಂದರು.

ಅಭಿಯೋಜನೆ ಇಲಾಖೆಯ ಪರವಾಗಿ ವಾದ ಮಂಡಿಸಿದ ನಂತರ ನ್ಯಾಯಾಲಯ 23ನೇ ತಾರೀಖಿನ ವರೆಗೆ ಮಹೇಶ್ ಶೆಟ್ಟಿಯವರಿಗೆ  ನ್ಯಾಯಾಂಗ ಬಂಧನ ನೀಡಿದ್ದಾರೆ.  ಅಭಿಯೋಜನೆಯವರು ಕೂಡ 23ರಂದು  ಬೆಳಿಗ್ಗೆ  ಆಕ್ಷೇಪಣೆಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.  ಜಾಮೀನು ರಹಿತ ಬಂಧನವಾಗಿರುವುದರಿಂದ ನ್ಯಾಯಾಲಯ ಸುಮೊಟೋ ಆರೋಪಿಯನ್ನು ಬಿಡುಗಡೆ ಮಾಡಲು ಆಗಲ್ಲ.  ಅಭಿಯೋಜನೆ ಸಲ್ಲಿಸಿದ ಆಕ್ಷೇಪಣೆಯ ನಂತರ ವಾದ ವಿವಾದಗಳು ನ್ಯಾಯಾಲಯದಲ್ಲಿ ನಡೆಯಲಿಕ್ಕಿದೆ ಎಂದು ಅವರು ತಿಳಿಸಿದರು.

ಇದು ಬಿ.ಎಲ್.ಸಂತೋಷ್ ಅವರ ವಿರುದ್ಧವಾದ ಹೇಳಿಕೆಯಾದರೂ ಬಿ.ಎಲ್.ಸಂತೋಷ್ ಆರೋಪಿಯ ವಿರುದ್ಧ ದೂರು ನೀಡಿಲ್ಲ, ದೂರುದಾರರು ಶಾಂತಿ ಕದಡುವ ಸಾಧ್ಯತೆ ಇದೆ ಅಂತ  ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ 16ನೇ ತಾರೀಖಿಗೆ ವಿಡಿಯೋ ವೈರಲ್ ಆಗಿದೆ,  ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.  ಅದರಿಂದಾಗಿ ನ್ಯಾಯಾಲಯ ಜಾಮೀನು ಮಂಜೂರು ಮಾಡಬೇಕು. ಆರೋಪಿಯನ್ನು ಬಂಧನ ಮಾಡಿದ ಕಾರಣ ಸರಿಯಿಲ್ಲ  ಎಂದು ನಾನು ಕೋರ್ಟ್ ಗೆ ಮನವರಿಕೆ ಮಾಡಿದ್ದೇನೆ, ನೂರಕ್ಕೆ ನೂರು ಅವರಿಗೆ ಬೇಲ್ ಸಿಗುತ್ತದೆ ಎನ್ನುವ ವಿಶ್ವಾಸ  ನನಗಿದೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ