ನಿತ್ಯಾನಂದ ಕೈಲಾಸದ ವಿಳಾಸ ಸದ್ಯದಲ್ಲೇ ಬಯಲು ಮಾಡ್ತಾನಾ?: ಇಲ್ಲಿದೆ ವಿವರ

ಬೆಂಗಳೂರು: ಬಿಡದಿ ಬಿಟ್ಟು ಓಡಿ ಹೋಗಿರುವ ಭಕ್ತರ ಸ್ವಂತ ದೇವರು ನಿತ್ಯಾನಂದ ಸ್ವತಂತ್ರ ‘ಕೈಲಾಸ’ ದೇಶ ಸ್ಥಾಪನೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದ. ಇದೀಗ ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ನಿತ್ಯಾನಂದ ತನ್ನ ಕೈಲಾಸ ದೇಶದ ಸ್ಥಳ ಎಲ್ಲಿದೆ ಎನ್ನುವುದನ್ನು ಪ್ರಕಟಿಸುವುದಾಗಿ ಘೋಷಿಸಿದ್ದಾನೆ.
ಇದೇ ಮೊದಲ ಬಾರಿಗೆ ನಿತ್ಯಾನಂದ ಕೈಲಾಸದ ಸ್ಥಳ ಘೋಷಿಸುವುದಾಗಿ ಹೇಳಿಕೊಂಡಿದ್ದು, ಜುಲೈ 21ರಂದು ಪ್ರಕಟಿಸುವುದಾಗಿ ಘೋಷಿಸಿದ್ದಾನೆ.
ನಿತ್ಯಾನಂದ ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದನು. ಆತನ ಬಂಧನಕ್ಕೆ ಪೊಲೀಸರು ಸಿದ್ಧವಾಗುತ್ತಿದ್ದಂತೆಯೇ ನಿತ್ಯಾನಂದ ಕರ್ನಾಟಕ ಬಿಟ್ಟಿದ್ದ. ನಂತರ ಆತನನ್ನು ಮಧುರೈ ಅದೀನಂ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
ಬಳಿಕ ಆತ ದೇಶ ಬಿಟ್ಟು ಪರಾರಿಯಾಗಿದ್ದ. ನಂತರ ತಾನು ಸ್ವತಂತ್ರ ದೇಶವನ್ನು ಹುಟ್ಟು ಹಾಕಿರುವುದಾಗಿಯೂ, ಆ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿರುವುದಾಗಿಯೂ, ಪ್ರತ್ಯೇಕ ಧ್ವಜ, ಪಾಸ್ ಪೋರ್ಟ್ ನೀಡಿ ದೇಶಾದ್ಯಂತ ಸುದ್ದಿಯಾಗಿದ್ದ.
ಇದೀಗ ನಿತ್ಯಾನಂದ ಕೈಲಾಸ ಎಲ್ಲಿದೆ ಎಂಬುದನ್ನು ತಿಳಿಸುವುದಾಗಿ ಹೇಳಿದ್ದಾನೆ. ಜುಲೈ 21ರಂದು ಕೈಲಾಸದ ಸ್ಥಳವನ್ನು ಪ್ರಕಟಿಸುವುದಾಗಿ ನಿತ್ಯಾನಂದ ಪ್ರಕಟಿಸಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ..
ಕೈಲಾಸ ತೆರೆದುಕೊಂಡಿದೆ, 21 ಗುರುಪೂರ್ಣಿಮೆಯ ದಿನ ಕೈಲಾಸ ಸ್ಥಳವನ್ನು ಪ್ರಕಟಿಸಲಾಗುವುದು ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97