ನನ್ನ ಆರೋಪ ಸುಳ್ಳಾದರೆ ನಾನು ರಾಜಕೀಯ ತೊರೆಯುತ್ತೇನೆ: ನವಜೋತ್ ಸಿಂಗ್ ಸಿಧು ಸವಾಲು ಹಾಕಿದ್ಯಾಕೆ..? - Mahanayaka
12:18 AM Wednesday 27 - August 2025

ನನ್ನ ಆರೋಪ ಸುಳ್ಳಾದರೆ ನಾನು ರಾಜಕೀಯ ತೊರೆಯುತ್ತೇನೆ: ನವಜೋತ್ ಸಿಂಗ್ ಸಿಧು ಸವಾಲು ಹಾಕಿದ್ಯಾಕೆ..?

17/12/2023


Provided by

ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ರಾಜ್ಯದ ಜೈಲುಗಳಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನನ್ನ ಹೇಳಿಕೆಗಳು ತಪ್ಪು ಎಂದು ಸಾಬೀತಾದರೆ ತಾನು ರಾಜಕೀಯವನ್ನು ತೊರೆಯುತ್ತೇನೆ ಎಂದು ಸವಾಲ್ ಹಾಕಿದ್ದಾರೆ.

ಈ ಕುರಿತು ಕ್ರಮ ಕೈಗೊಳ್ಳದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಜೈಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಡ್ರಗ್ ಮಾಫಿಯಾ ಹೆಚ್ಚಾಗಿದೆ. ಸಿಎಂ ಭಗವಂತ್ ಮಾನ್ ಏನು ಮಾಡಿದ್ದಾರೆ..? ಜೈಲುಗಳ ಒಳಗೆ ಡ್ರಗ್ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿದೆ. ನಾನು ಸುಳ್ಳುಗಾರ ಎಂದು ಸಾಬೀತಾದರೆ ರಾಜಕೀಯ ತೊರೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

1988ರಲ್ಲಿ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವಜೋತ್ ಸಿಂಗ್ ಸಿಧು ಅವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಅವರು 10 ತಿಂಗಳು ಜೈಲಿನಲ್ಲಿದ್ದರು. ಈ ಘಟನೆಯಲ್ಲಿ ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು.
ಆದಾಗ್ಯೂ, ಜೈಲಿನಲ್ಲಿದ್ದಾಗ ಅವರ ಉತ್ತಮ ನಡವಳಿಕೆಯಿಂದಾಗಿ ಅವರ ಜೈಲು ಶಿಕ್ಷೆಯ ಅವಧಿ ಮುಗಿಯುವ ಮೊದಲು ಅವರನ್ನು ಬಿಡುಗಡೆ ಮಾಡಲಾಗಿತ್ತು.

ಎರಡು ರಾಜ್ಯಗಳಲ್ಲಿ ಮಾದಕ ವ್ಯಸನದಿಂದ ಬಳಲುತ್ತಿರುವ ಜನರ ವಿವರಗಳ ಬಗ್ಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಗೆ ಸೂಚಿಸಿದ ಕೆಲವೇ ದಿನಗಳ ನಂತರ ಜೈಲುಗಳಲ್ಲಿ ಮಾದಕವಸ್ತುಗಳ ಮಾರಾಟದ ಬಗ್ಗೆ ನವಜೋತ್ ಸಿಂಗ್ ಸಿಧು ಅವರು ಈ ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚಿನ ಸುದ್ದಿ