ಕಾಂಗ್ರೆಸ್‌ ಗೆ ಸೇರ್ಪಡೆಯಾಗುತ್ತಾರಾ ಸುಮಲತಾ ಅಂಬರೀಶ್‌? - Mahanayaka
12:39 AM Thursday 11 - December 2025

ಕಾಂಗ್ರೆಸ್‌ ಗೆ ಸೇರ್ಪಡೆಯಾಗುತ್ತಾರಾ ಸುಮಲತಾ ಅಂಬರೀಶ್‌?

sumalatha
12/01/2024

ಮಂಡ್ಯ: ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಕಳೆದ ಬಾರಿ ಮಂಡ್ಯದ ಸ್ವಾಭಿಮಾನದ ಹೆಸರಿನಲ್ಲಿ ಮತ ಕೇಳಿದ್ದ ಸುಮಲತಾ ಅಂಬರೀಶ್‌ ರಾಜ್ಯ ಮತ್ತು ರಾಷ್ಟ್ರ ಪಕ್ಷಗಳನ್ನು ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ಇದೀಗ ಮತ್ತೊಮ್ಮೆ ಚುನಾವಣೆ ಎದುರಾಗಿದ್ದು, ಬಿಜೆಪಿ ಜೊತೆಗೆ ಸುಮಲತಾ ಆತ್ಮೀಯರಾಗಿದ್ದರು. ಆದ್ರೆ ಏಕಾಏಕಿ ನಡೆದ ಬೆಳವಣಿಗೆಯಲ್ಲಿ  ಜೆಡಿಎಸ್—ಬಿಜೆಪಿ ಮೈತ್ರಿ  ಮಾಡಿಕೊಂಡಿದೆ. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದೆ ಎನ್ನಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಗಮನಿಸುತ್ತಿದ್ದು, ಪರಿಸ್ಥಿತಿಯನ್ನು ತನ್ನ ಗೆಲುವಿಗೆ ಬಳಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸುಮಲತಾ ಅವರ ಬೆಂಬಲಿಗರ ಬಣ ಎರಡಾಗಿ ವಿಭಾಗವಾಗಿದೆ. ಒಂದು ಬಣ ಜೆಡಿಎಸ್—ಬಿಜೆಪಿ ಮೈತ್ರಿಯ ಪರವಾಗಿದೆ ಅಂತ ಹೇಳಲಾಗುತ್ತಿದೆ.  ಈ ನಡುವೆ ಸುಮಲತಾ ಅವರು ಕಾಂಗ್ರೆಸ್‌ ಪರ ಒಲವು ತೋರಿಸುವ ಸಾಧ್ಯತೆಗಳಿದ್ದು,  ಕಾಂಗ್ರೆಸ್‌ ಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಅನ್ನೋ ಮಾತು ಕೇಳಿ ಬಂದಿದೆ.

ಇನ್ನೂ ಸುಮಲತಾ ಅವರನ್ನು ಕಾಂಗ್ರೆಸ್‌ ಗೆ ಕರೆತರಲು ಸಿಎಂ ಸಿದ್ದರಾಮಯ್ಯನವರೇ ತೆರೆಮರೆಯಲ್ಲಿ ಪ್ಲಾನ್‌ ಮಾಡುತ್ತಿದ್ದಾರೆ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.  ಸ್ವತಃ ಕುಮಾರಸ್ವಾಮಿ ಅವರೇ ಮಂಡ್ಯದಲ್ಲಿ ಸ್ಪರ್ಧಿಸಿದರೂ ಸುಮಲತಾ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ, ಹೀಗಾಗಿ ಸುಮಲತಾ ಅವರನ್ನು ಕಾಂಗ್ರೆಸ್‌ ಗೆ ಕರೆತಂದು ಮಂಡ್ಯ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್‌ ಮುಂದಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ