ವಿರೋಧ ಪಕ್ಷದ ಮೈತ್ರಿಯು ತನ್ನನ್ನು ‘ಭಾರತ್’ ಎಂದು ಕರೆದ್ರೆ ನೀವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತೀರಾ..? ಕೇಜ್ರಿವಾಲ್ ಪ್ರಶ್ನೆ - Mahanayaka

ವಿರೋಧ ಪಕ್ಷದ ಮೈತ್ರಿಯು ತನ್ನನ್ನು ‘ಭಾರತ್’ ಎಂದು ಕರೆದ್ರೆ ನೀವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತೀರಾ..? ಕೇಜ್ರಿವಾಲ್ ಪ್ರಶ್ನೆ

05/09/2023


Provided by

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ವಿದೇಶಿ ನಾಯಕರಿಗೆ ಅಧಿಕೃತ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ‘ಭಾರತದ ರಾಷ್ಟ್ರಪತಿ’ ಎಂದು ಬಳಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಸೃಷ್ಟಿಸಿದೆ. ಆಮಂತ್ರಣ ಪತ್ರಿಕೆಯಲ್ಲಿ ಬಳಸಲಾದ ಪದದ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ವಿರೋಧ ಪಕ್ಷದ ಮೈತ್ರಿಯು ತನ್ನನ್ನು ‘ಭಾರತ್’ ಎಂದು ಕರೆಯಲು ನಿರ್ಧರಿಸಿದರೆ ಆಡಳಿತ ಪಕ್ಷವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತದೆಯೇ ಕೇಳಿದ್ದಾರೆ.

ಇಂದು‌ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಹೆಸರು ಬದಲಾವಣೆ ನಡೆಯುತ್ತಿದೆ ಎಂದು ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಲವು ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡು ಇಂಡಿಯಾ ಎಂದು ಕರೆದ ಕಾರಣ ಕೇಂದ್ರವು ಅದನ್ನು ಬದಲಾಯಿಸುತ್ತದೆಯೇ? ದೇಶದ ಹೆಸರೇನು?ದೇಶವು 140 ಕೋಟಿ ಜನರಿಗೆ ಸೇರಿದ್ದು, ಒಂದು ಪಕ್ಷಕ್ಕಲ್ಲ, ಮೈತ್ರಿಯ ಹೆಸರನ್ನು ಭಾರತ್ ಎಂದು ಬದಲಾಯಿಸಿದರೆ, ಅವರು ಭಾರತ್ ಹೆಸರನ್ನು ಬಿಜೆಪಿ ಎಂದು ಬದಲಾಯಿಸುತ್ತಾರೆಯೇ? ಎಂದು ಕೇಳಿದ್ದಾರೆ.

ಕೇಜ್ರಿವಾಲ್ ಅವರ ಪಕ್ಷದ ಸಹೋದ್ಯೋಗಿ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶವು ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ ಎಂದಿದ್ದಾರೆ.

ಇತ್ತೀಚಿನ ಸುದ್ದಿ