ದೆವ್ವ ಹಿಡಿದೆ ಎಂದು ರಾತ್ರಿಯಿಡೀ ಹಲ್ಲೆ: ಮಹಿಳೆ ಸಾವು

ಶಿವಮೊಗ್ಗ(Mahanayaka): ಅನಾರೋಗ್ಯ ಪೀಡಿತ ಮಹಿಳೆಗೆ ದೆವ್ವ ಹಿಡಿದಿದೆ ಎಂದು ಮಹಿಳೆಯೊಬ್ಬಳು ದೆವ್ವ ಬಿಡಿಸುವುದಾಗಿ ಹೇಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕು ಜಂಬರಗಟ್ಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಮೃತಪಟ್ಟವರು. ಗೀತಮ್ಮ ಅನಾರೋಗ್ಯದಿಂದ ಮಂಕಾಗಿದ್ದರು. ಜುಲೈ 6ರಂದು ಮನೆಗೆ ಬಂದಿದ್ದ ಮಹಿಳೆಯೊಬ್ಬಳು, ಗೀತಮ್ಮನಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಗೀತಮ್ಮನ ಮಗ ಸಂಜಯ್ ಗೆ ಹೇಳಿದ್ದಾರೆ. ತಾಯಿ ಗುಣಮುಖವಾಗಬೇಕು ಎಂದು ಸಂಜಯ್ ಒಪ್ಪಿಕೊಂಡಿದ್ದ. ಬಳಿಕ ಮಹಿಳೆ ತನ್ನ ಮೈಮೇಲೆ ಚೌಡಮ್ಮ ಬಂದಿದ್ದಾಳೆ ಎಂದು ಗೀತಮ್ಮನಿಗೆ ಕೋಲಿನಿಂದ ಹಲ್ಲೆ ನಡೆಸಿ, ದೆವ್ವ ಬಿಟ್ಟು ಹೋಗು ಎಂದಿದ್ದಾಳೆ, ಆದರೆ ದೆವ್ವ ಬಿಟ್ಟಿಲ್ಲ ಎಂಬ ಕಾರಣಕ್ಕೆ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿ ಬೆಳಗ್ಗೆ 2:30ರವರೆಗೆ ಥಳಿಸಿದ್ದು, ಬಳಿಕ ಗೀತಮ್ಮನ ಮೈಮೇಲಿದ್ದ ಆತ್ಮ ಹೋಗಿದೆ ಎಂದು ಹೇಳಿ ಮನೆಗೆ ಕಳಿಸಿದ್ದಾರೆ. ಮಹಿಳೆಯ ಹಲ್ಲೆಯಿಂದ ಗೀತಮ್ಮ ತೀವ್ರವಾಗಿ ಅಸ್ವಸ್ಥರಾಗಿದ್ದು, ಆಕೆಯನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯಾಧಿಕಾರಿಗಳು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ಸದ್ಯ ಹಲ್ಲೆ ನಡೆಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಇದೀಗ ತನ್ನ ಮನೆಯವರ ಮೌಢ್ಯತನಕ್ಕೆ ಬಲಿಯಾಗಿರೋದು ನಿಜಕ್ಕೂ ದುರಂತ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD