ಮರ್ಸಿಡಿಸ್ ಕಾರು ಅಪಘಾತ ಪ್ರಕರಣ:‌4 ತಿಂಗಳ ಬಳಿಕ ಪೊಲೀಸರಿಗೆ ಶರಣಾದ ಮಹಿಳಾ ಚಾಲಕಿ - Mahanayaka
6:31 AM Saturday 20 - December 2025

ಮರ್ಸಿಡಿಸ್ ಕಾರು ಅಪಘಾತ ಪ್ರಕರಣ:‌4 ತಿಂಗಳ ಬಳಿಕ ಪೊಲೀಸರಿಗೆ ಶರಣಾದ ಮಹಿಳಾ ಚಾಲಕಿ

02/07/2024

ನಾಲ್ಕು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಮದ್ಯದ ಅಮಲಿನಲ್ಲಿ ಮರ್ಸಿಡಿಸ್ ಕಾರನ್ನು ಚಲಾಯಿಸುತ್ತಿದ್ದಾಗ ಇಬ್ಬರು ಪುರುಷರನ್ನು ಕೊಂದ ಆರೋಪ ಹೊತ್ತಿದ್ದ ಮಹಿಳೆ ಪೊಲೀಸರಿಗೆ ಶರಣಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿತಿಕಾ ಅಲಿಯಾಸ್ ರಿತು ಮಾಲೂ ನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲಿ ವಿಚಾರಣೆಯ ನಂತರ ಸಂಜೆ ಔಪಚಾರಿಕವಾಗಿ ಬಂಧಿಸಲಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು ಮಹಿಳೆಗೆ ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿತ್ತು. ಯಾವುದೇ ವಿವೇಕಯುತ ವ್ಯಕ್ತಿಯು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದಿಲ್ಲ. ಅಲ್ಲದೇ ಇದನ್ನು ಗಂಭೀರ ದುರ್ನಡತೆ ಎಂದು ಕೋರ್ಟ್ ಕರೆದಿತ್ತು.

ಫೆಬ್ರವರಿ 25 ರಂದು ರಾಮ್ ಜುಲಾ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಮಾಲೂ ಮದ್ಯದ ಅಮಲಿನಲ್ಲಿ ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ