ಪ್ರಿಯಕರನ ಜೊತೆಗೆ ಮದ್ವೆಗೆ ಒಲ್ಲೆ ಎಂದ ಕುಟುಂಬಸ್ಥರು: ಅಪಾರ್ಟ್‌ಮೆಂಟ್‌ ನಿಂದ ಜಿಗಿದ ಯುವತಿ; ಕೊನೆಗೆ ಏನಾಯ್ತು ಗೊತ್ತಾ..? - Mahanayaka

ಪ್ರಿಯಕರನ ಜೊತೆಗೆ ಮದ್ವೆಗೆ ಒಲ್ಲೆ ಎಂದ ಕುಟುಂಬಸ್ಥರು: ಅಪಾರ್ಟ್‌ಮೆಂಟ್‌ ನಿಂದ ಜಿಗಿದ ಯುವತಿ; ಕೊನೆಗೆ ಏನಾಯ್ತು ಗೊತ್ತಾ..?

12/07/2023


Provided by

ಟೆಲಿಗ್ರಾಂನಲ್ಲಿ ಪರಿಚಯವಾಗಿ ಪ್ರೇಮಾಂಕುರಗೊಂಡ ವ್ಯಕ್ತಿಯೊಂದಿಗೆ ಮದುವೆ ಬೇಡ ಎಂದು ಹೆತ್ತವರು ವಿರೋಧಿಸಿದ್ದಕ್ಕೆ 24 ವರ್ಷದ ಯುವತಿ ನೋಯ್ಡಾದಲ್ಲಿ ತನ್ನ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.

ಸೆಕ್ಟರ್ 121ರ ಅಜ್ನಾರಾ ಹೋಮ್ಸ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಯುವತಿಯು ಎಂಬಿಎ ವಿದ್ಯಾರ್ಥಿನಿಯಾಗಿದ್ದು, ಆಕೆ ಮದುವೆಯಾಗಲು ಬಯಸಿದ್ದ ವ್ಯಕ್ತಿಗೆ 23 ವರ್ಷ ವಯಸ್ಸು. ಈಕೆ ಪಶ್ಚಿಮ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿಯಾಗಿದ್ದಾಳೆ.

ಮಹಿಳೆ ಮತ್ತು ಆಕೆ ಮದುವೆಯಾಗಲು ಬಯಸಿದ ವ್ಯಕ್ತಿ ಟೆಲಿಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಮಹಿಳೆಯ ಕುಟುಂಬ ಸದಸ್ಯರಿಗೆ ಅವರ ಪ್ರೇಮದ ಬಗ್ಗೆ ತಿಳಿದಾಗ ಅವರು ಈ ಸಂಬಂಧವನ್ನು ವಿರೋಧಿಸಿದ್ದರು. ಯುವತಿಯು ತನ್ನ ಪ್ರಿಯಕರನ್ನು ಮದುವೆಯಾಗಲು ಇಚ್ಚಿಸಿದಾಗ ಆಕೆಯ ಕುಟುಂಬ ಸದಸ್ಯರು ಅದನ್ನು ಒಪ್ಪಿಗೆ ಸೂಚಿಸಿಲ್ಲ.

ಮಹಿಳೆಯ ಮನೆಯವರು ಯುವತಿಯ ಮೊಬೈಲನ್ನು ಇಂದು ಕಸಿದುಕೊಂಡಾಗ ಇದರಿಂದ ಕೋಪಗೊಂಡ ಆಕೆ ಎರಡನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಿಂದ ಕೆಳಗೆ ಜಿಗಿದಿದ್ದಾಳೆ. ಪರಿಣಾಮ ಯುವತಿಗೆ ಗಾಯಗಳಾಗಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ