ಕೊಳೆತು ನಾರುತ್ತಿದ್ದ ನಾಯಿಯ ಜೊತೆಗೆ ಮಹಿಳೆ ವಾಸ!: ಬೆಚ್ಚಿಬೀಳಿಸಿದ ಘಟನೆ

ಬೆಂಗಳೂರು: ಮಹಿಳೆಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್(Labrador Retriever) ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿರುವ ಆರೋಪ ಕೇಳಿ ಬಂದಿದ್ದು, ಸತ್ತ ನಾಯಿಯ ಮೃತದೇಹವನ್ನು ಫ್ಲಾಟ್ ನಲ್ಲೇ ಇರಿಸಿಕೊಂಡು ಅದರ ಜೊತೆಗೆ ವಾಸಿಸಿರುವ ಘಟನೆ ಬೆಳಕಿಗೆ ಬಂದಿದೆ.
AKME Ballet Apartment ಅಸೋಸಿಯೇಷನ್– 404 ಫ್ಲ್ಯಾಟ್ನಲ್ಲಿ ಮಾಲಕಿ ತ್ರಿಪರ್ಣಾ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದೆ. ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದು, ಮನೆಯಲ್ಲಿ ಮೃತದೇಹದ ಗುಬ್ಬು ವಾಸನೆ ಮಧ್ಯೆಯೇ ವಾಸ ಮಾಡಿದ್ದಾಳೆ. ವಾಸನೆಯಿಂದ ಕಂಗೆಟ್ಟ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ.
ಬಿಬಿಎಂಪಿ ಅನಿಮಲ್ ಹಸ್ಬೇಂಡ್ರಿ ಸಹಾಯಕ ನಿರ್ದೇಶಕರು ಮತ್ತು ಪ್ರಾಣಿ ಪ್ರಿಯರು ಮನೆ ಒಳಗಡೆಗೆ ಹೋಗಿ ನೋಡಿದ ವೇಳೆ ಮನೆಯಲ್ಲಿ ಊಟ ಇಲ್ಲದೇ 2 ಶ್ವಾನಗಳು ಬಳಲಿದ್ರೆ, ಮತ್ತೊಂದು ಶ್ವಾನ ಜೀವಬಿಟ್ಟು ಗಬ್ಬು ನಾರುತ್ತಿತ್ತು. ಸದ್ಯ ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಮಹಿಳೆಯ ವಿರುದ್ಧ FIR ದಾಖಲಾಗಿದೆ. ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ವಿವರ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD