ಪ್ರಿಯಕರನ ಜೊತೆಗೆ ಸಿಕ್ಕಿಬಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಪತಿ! - Mahanayaka

ಪ್ರಿಯಕರನ ಜೊತೆಗೆ ಸಿಕ್ಕಿಬಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಪತಿ!

gungulappa
09/03/2024

ಚಿಕ್ಕಬಳ್ಳಾಪುರ:  ಪ್ರಿಯಕರನ ಜೊತೆಗೆ ಸಿಕ್ಕಿಬಿದ್ದ ಪತ್ನಿಯನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚೇಳೂರಿನ ಚಿನಗಾನಪಲ್ಲಿಯಲ್ಲಿ  ನಡೆದಿದೆ.

ನರಸಮ್ಮ(45) ಹತ್ಯೆಗೀಡಾದ ಮಹಿಳೆಯಾಗಿದ್ದು, ಇವರ ಪತಿ ಗಂಗುಲಪ್ಪ(55) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.

ಆರೋಪಿ ಹಾಗೂ ಆತನ ಪತ್ನಿಯ ನಡುವೆ ಪ್ರಿಯಕರನ ವಿಚಾರವಾಗಿ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ಹೇಳಲಾಗಿದೆ.

ಸದ್ಯ ಪಾತಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ