ಗರ್ಭಧಾರಣೆಯ ಕಾರಣಕ್ಕೆ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನಿರಾಕರಿಸುವಂತಿಲ್ಲ: ಉತ್ತರಾಖಂಡ ಹೈಕೋರ್ಟ್ ತೀರ್ಪು - Mahanayaka
7:00 PM Saturday 18 - October 2025

ಗರ್ಭಧಾರಣೆಯ ಕಾರಣಕ್ಕೆ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನಿರಾಕರಿಸುವಂತಿಲ್ಲ: ಉತ್ತರಾಖಂಡ ಹೈಕೋರ್ಟ್ ತೀರ್ಪು

26/02/2024

ಗರ್ಭಧಾರಣೆಯ ಕಾರಣದಿಂದಾಗಿ ಮಹಿಳೆಗೆ ಉದ್ಯೋಗವನ್ನು ನಿರಾಕರಿಸುವಂತಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ. ಗರ್ಭಿಣಿಯರನ್ನು ಸರ್ಕಾರಿ ಉದ್ಯೋಗಗಳಿಗೆ ಸೂಕ್ತವೆಂದು ಪರಿಗಣಿಸುವುದನ್ನು ನಿಷೇಧಿಸುವ ನಿಯಮವನ್ನು ನ್ಯಾಯಾಲಯ ರದ್ದುಗೊಳಿಸಿತು. ತಾಯ್ತನವು “ದೊಡ್ಡ ಆಶೀರ್ವಾದ” ಎಂದು ಹೈಕೋರ್ಟ್ ಇದೇ ವೇಳೆ ಒತ್ತಿ ಹೇಳಿತು.


Provided by

ಗರ್ಭಧಾರಣೆಯ ಕಾರಣದಿಂದಾಗಿ ನೈನಿತಾಲ್ ನ ಬಿಡಿ ಪಾಂಡೆ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಯನ್ನು ನಿರಾಕರಿಸಲ್ಪಟ್ಟ ಮಿಶಾ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಹಾನಿರ್ದೇಶಕರು ಅವರಿಗೆ ನೇಮಕಾತಿ ಪತ್ರವನ್ನು ನೀಡಿದ್ದರೂ, ಫಿಟ್ನೆಸ್ ಪ್ರಮಾಣಪತ್ರವನ್ನು ಉಲ್ಲೇಖಿಸಿ ಆಸ್ಪತ್ರೆಯು ಆಕೆಗೆ ಸೇರಲು ಅವಕಾಶ ನೀಡಲು ನಿರಾಕರಿಸಿತು. ಗರ್ಭಧಾರಣೆಯನ್ನು ಹೊರತುಪಡಿಸಿ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿತ್ತು.

12 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಗರ್ಭಿಣಿಯಾದ ಮಹಿಳೆಯರು ಉದ್ಯೋಗಕ್ಕೆ ತಾತ್ಕಾಲಿಕವಾಗಿ ಅನರ್ಹರು ಎಂಬ ರಾಜ್ಯ ಸರ್ಕಾರದ ನಿಯಮವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೆರಿಗೆಯ ದಿನಾಂಕದ ಆರು ವಾರಗಳ ನಂತರ ಮಹಿಳೆಯನ್ನು ನೋಂದಾಯಿತ ವೈದ್ಯರಿಂದ ಪರೀಕ್ಷಿಸಬೇಕು ಮತ್ತು ಫಿಟ್ನೆಸ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂದು ಅದು ಹೇಳಿದೆ. ಹೈಕೋರ್ಟ್ ಈ ನಿಯಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇದನ್ನು “ಅಸಂವಿಧಾನಿಕ” ಎಂದು ಕರೆಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ