ಉಚಿತ ಪ್ರಯಾಣ ಮಾಡಿದ ಚಾಮರಾಜನಗರದ ಮಹಿಳೆಯರ  ಸಂತಸ, ಉತ್ಸಾಹ ನೋಡಿ..!! - Mahanayaka
6:34 AM Wednesday 22 - October 2025

ಉಚಿತ ಪ್ರಯಾಣ ಮಾಡಿದ ಚಾಮರಾಜನಗರದ ಮಹಿಳೆಯರ  ಸಂತಸ, ಉತ್ಸಾಹ ನೋಡಿ..!!

chamarajanagara
11/06/2023

ಚಾಮರಾಜನಗರ: ಇಂದು ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರಕಿತು. ಬಸ್ ಹತ್ತಲು ಮಹಿಳಾ ಜಾತ್ರೆಯೇ ನೆರೆದಿದ್ದರಿಂದ ಎಲ್ಲಾ ಬಸ್ ಗಳಲ್ಲೂ ನೂಕು ನುಗ್ಗಲು ಕಂಡುಬಂದಿತು‌.

ಚಾಮರಾಜನಗರದ ಶಾಹಿದಾ ಬಾನು ಎಂಬವರು ಮಾತನಾಡಿ, ಬಸ್ ನಿಲ್ದಾಣದಲ್ಲಿ ಚಿನ್ನದ ಮಳೆ ಬಂದಂತೆ ಜನರು ಸೇರಿದ್ದರು, ಬಸ್ ನಿಲ್ದಾಣದಲ್ಲಿ ಇಷ್ಟು ಜನರನ್ನು ನಾನು ನೋಡಿಯೇ ಇರಲಿಲ್ಲ ಎಂದರು.

ಮತ್ತೋರ್ವ ಮಹಿಳೆ ನಯಿದಾ ಮಾತನಾಡಿ, ಊರುಗಳಿಗೆ ತೆರಳುವಾಗ ಹಣ ಹೊಂದಿಸಬೇಕಿತ್ತು ಈಗ ಆ ತಾಪತ್ರಯ ಇಲ್ಲಾ ಎಂದು ಸಂತಸ ವ್ಯಕ್ತಪಡಿಸಿದರು. ‌ಸವಿತಾ ಎಂಬವರು ಮಾತನಾಡಿ, ಉಚಿತ ಬಸ್ ಪ್ರಯಾಣ ಕೊಟ್ಟಿರುವುದು ಬಹಳಷ್ಟು ಉಪಯುಕ್ತವಾಗಿದೆ, ಇಂದು ಹೆಚ್ಚಿನ ಮಹಿಳೆಯರು ಪ್ರಯಾಣ ಮಾಡಲು ಬಂದಿದ್ದಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ