ಬಸ್ ಹತ್ತಲು ಮಹಿಳೆಯರ ನೂಕು ನುಗ್ಗಲು- ಕಿತ್ತು ಬಂದ ಡೋರ್!! - Mahanayaka

ಬಸ್ ಹತ್ತಲು ಮಹಿಳೆಯರ ನೂಕು ನುಗ್ಗಲು– ಕಿತ್ತು ಬಂದ ಡೋರ್!!

17/06/2023


Provided by

ಚಾಮರಾಜನಗರ: ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು ಉಂಟಾಗಿ ಬಸ್ ಬಾಗಿಲು ಮುರಿದು ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್​ ರಸ್​ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲನ್ನೇ ಮಹಿಳಾಮಣಿಗಳು ಮುರಿದು ಹಾಕಿದ್ದಾರೆ.

ಏಕಾಏಕಿ ಬಸ್​ ಡೋರ್​ ಮುರಿದು ಬಂದ ಕಾರಣ ಬಸ್ ಕಂಡಕ್ಟರ್​ ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದ ದೃಶ್ಯ ಕಂಡು ಬಂತು

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ವೈರಲ್ಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ