ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಎಷ್ಟು ಇತ್ಯರ್ಥವಾಗಿದೆ?: ವಿದ್ಯಾರ್ಥಿನಿ ಪ್ರಶ್ನೆಗೆ ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ  - Mahanayaka
11:51 PM Monday 24 - November 2025

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಎಷ್ಟು ಇತ್ಯರ್ಥವಾಗಿದೆ?: ವಿದ್ಯಾರ್ಥಿನಿ ಪ್ರಶ್ನೆಗೆ ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ 

nagalakshmi
13/04/2025

ಮೈಸೂರು: ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಮಹಿಳಾ ಆಯೋಗದ ಅಧ್ಯಕ್ಷೆ  ನಾಗಲಕ್ಷ್ಮೀ ಚೌಧರಿ ತಡಬಡಾಯಿಸಿದ ಘಟನೆ ನಡೆದಿದೆ.

ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಿದ ವಿದ್ಯಾರ್ಥಿನಿಯೊಬ್ಬಳು, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಎಷ್ಟು, ಎಷ್ಟು ಪ್ರಕರಣ ಇತ್ಯರ್ಥ ಆಗಿದೆ? ಅಂತ ಪ್ರಶ್ನೆ ಕೇಳಿದ್ದಾಳೆ.

ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ನಾಗಲಕ್ಷ್ಮೀ ಚೌಧರಿ ವಿಫಲವಾದರಲ್ಲದೇ,  ನ್ಯಾಯಾಲಯಗಳ ಆದೇಶ ನಾವು ಪ್ರಶ್ನಿಸಲು ಸಾಧ್ಯವಿಲ್ಲ, ಎಲ್ಲದಕ್ಕೂ ಸಾಕ್ಷಿ ಮುಖ್ಯ ಎಂದು ಕಾನೂನು ಹೇಳುತ್ತದೆ. ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ರೆ ರಿಪೋರ್ಟ್ ಬರಲು 5 ತಿಂಗಳು ಬೇಕು. ನಮಗೆ ಇಲ್ಲಿ ಹಿನ್ನಡೆಯಾಗುತ್ತಿದೆ ಎಂದಷ್ಟೇ ಉತ್ತರಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ