ನಿಶ್ಚಿತಾರ್ಥದ ಸಂದರ್ಭದಲ್ಲಿಯೇ ಸಿಬಿಐ ನೋಟಿಸ್ ಬಂತು | ಯಡಿಯೂರಪ್ಪ ಈ ಹಂತಕ್ಕೆ ಇಳಿಯಬಾರದಿತ್ತು | ಡಿ.ಕೆ.ಶಿವಕುಮಾರ್ ಅಸಮಾಧಾನ - Mahanayaka
11:04 AM Saturday 23 - August 2025

ನಿಶ್ಚಿತಾರ್ಥದ ಸಂದರ್ಭದಲ್ಲಿಯೇ ಸಿಬಿಐ ನೋಟಿಸ್ ಬಂತು | ಯಡಿಯೂರಪ್ಪ ಈ ಹಂತಕ್ಕೆ ಇಳಿಯಬಾರದಿತ್ತು | ಡಿ.ಕೆ.ಶಿವಕುಮಾರ್ ಅಸಮಾಧಾನ

24/11/2020


Provided by

ಕಲಬುರಗಿ: ನನ್ನ ಮಗಳ ಎಂಗೇಜ್ ಮೆಂಟ್ ಇದ್ದ ಸಂದರ್ಭದಲ್ಲಿಯೇ ಮನೆಗೆ ಬಂದು ನೋಟಿಸ್ ನೀಡಲಾಗಿದೆ. ನಾಳೆ ಸಿಬಿಐ ವಿಚಾರಣೆಗೆ ಹಾಜರಾಗಲು ಹೋಗುತ್ತಿದ್ದೇನೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್, ಯಡಿಯೂರಪ್ಪನವರ ಮೇಲೆ ಬೇಸರ ಮಾಡಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ.  ನನ್ನ ಮೇಲೆ ಎಫ್ ಐಆರ್ ಹಾಕಿರುವುದೇ ರಾಜಕೀಯ ಪ್ರೇರಿತ. ಯಡಿಯೂರಪ್ಪನವರು ಈ ಹಂತಕ್ಕೆ ಇಳಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಎಲ್ಲಾ ಶಾಸಕರುಗಳ ಅಫಿಡಿವೆಟ್ ತೆಗೆದುಕೊಳ್ತಾರೆ ಯಾರ ಆಸ್ತಿಯು ಹೆಚ್ಚಾಗಿಲ್ವಾ? ಅವರು ಯಾರನ್ನು ಕೂಡ ಸಿಬಿಐ ತನಿಖೆ ಮಾಡೋದಕ್ಕೆ ಮುಂದಾಗಿಲ್ಲ. ಮಗಳ ನಿಶ್ಚಿತಾರ್ಥ ದಿನ ಮನೆಯ ಬಾಗಿಲಿಗೆ ಬಂದು ನೋಟಿಸ್ ಕೊಡುತ್ತಾರೆ. ಒಂದು ವರ್ಷದಿಂದ ಸುಮ್ಮನಿದ್ದು ಮನೆಯ ಕಾರ್ಯಕ್ರಮ ಇದ್ದಾಗಲೇ ಬರಬೇಕಾ ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ