“ದೆಹಲಿಯ ಮಾಹಿತಿ ಪ್ರಕಾರ ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಇಳಿಯಲಿದ್ದಾರೆ” - Mahanayaka
12:53 AM Saturday 18 - October 2025

“ದೆಹಲಿಯ ಮಾಹಿತಿ ಪ್ರಕಾರ ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಇಳಿಯಲಿದ್ದಾರೆ”

04/11/2020

ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಯುವುದಿಲ್ಲ. ಅವರನ್ನು ಕುರ್ಚಿಯಿಂದ ಖಂಡಿತಾ ಕೆಳಗಿಳಿಸುತ್ತಾರೆ. ಈ ಬಗ್ಗೆ ನನಗೆ ದೆಹಲಿಯಿಂದ ಮಾಹಿತಿ ಬಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.



Provided by

ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ನಾನು ಅವರ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದ ಅವರು, ಬಿಜೆಪಿಯು ಹಲವು ದಿನಗಳಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿದೆ ಎಂದು ಅವರು ಹೇಳಿದರು.


ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಶಿರಾ ಹಾಗೂ ಆರ್.ಆರ್.ನಗರ ಎರಡೂ ಕಡೆಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜನರು ಕಾಂಗ್ರೆಸ್ ಪರವಾಗಿ ಒಲವು ತೋರಿಸಿದ್ದಾರೆ ಎಂದು ಅವರು ಹೇಳಿದರು.


ಇತ್ತೀಚಿನ ಸುದ್ದಿ