ಯಡಿಯೂರಪ್ಪನವರ ಮೊಮ್ಮಗಳ ಆತ್ಮಹತ್ಯೆಗೆ ಕಾರಣ ಏನು? - Mahanayaka
8:07 PM Thursday 16 - October 2025

ಯಡಿಯೂರಪ್ಪನವರ ಮೊಮ್ಮಗಳ ಆತ್ಮಹತ್ಯೆಗೆ ಕಾರಣ ಏನು?

sowndarya
28/01/2022

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ(30) ಇಂದು ಬೆಂಗಳೂರಿನ ವಸಂತ ನಗರದಲ್ಲಿರುವ ತಮ್ಮ ಫ್ಲಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  2018ರಲ್ಲಿ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ನೀರಜ್ ಎಂಬವರನ್ನು ವಿವಾಹವಾಗಿದ್ದ ಸೌಂದರ್ಯ ಅವರು ಕೂಡ ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು.


Provided by

ಈ ದಂಪತಿಗೆ 9 ತಿಂಗಳ ಮಗು ಕೂಡ ಇದೆ. ಆದರೆ, ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಸೌಂದರ್ಯ ಅವರು ಆತ್ಮಹತ್ಯೆ ನಡೆಸಿರುವ ಸುದ್ದಿ ಯಡಿಯೂರಪ್ಪನವರ ಕುಟುಂಬಕ್ಕೆ ಬರ ಸಿಡಿಲಿನಂತೆರಗಿತ್ತು. ಜೊತೆಗೆ ರಾಜ್ಯದ ಜನತೆಗೆ ಕೂಡ ಇದೊಂದು ಶಾಕಿಂಗ್ ನ್ಯೂಸ್ ಆಗಿತ್ತು.

ಡಾ.ನೀರಜ್ ಆಸ್ಪತ್ರೆಗೆ ಹೋದ ಬಳಿಕ ಮಗುವನ್ನು ಪಕ್ಕದ ರೂಮ್ ನಲ್ಲಿ ಮಲಗಿಸಿ ಬೇರೊಂದು ರೂಮ್ ಗೆ ತೆರಳಿದ ಸೌಂದರ್ಯ ಕೋಣೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಂಟೆಯ ವೇಳೆಗೆ ಕೆಲಸದಾಕೆ ಬಂದು ಬೆಲ್ ಪ್ರೆಸ್ ಮಾಡಿ, ಬಾಗಿಲು ಬಡಿದರೂ ಬಾಗಿಲು ತೆರೆದುಕೊಳ್ಳಲಿಲ್ಲ. ಹೀಗಾಗಿ ಅವರು ಡಾ.ನೀರಜ್ ಅವರಿಗೆ ಮಾಹಿತಿ ನೀಡಿದ್ದು, ಆ ಬಳಿಕ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಡಾ.ಸೌಂದರ್ಯ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದೇ ಕಾರಣದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿದೆ ಎಂದು ಸದ್ಯ ಹೇಳಲಾಗಿದೆ.  ವರದಿಗಳ ಪ್ರಕಾರ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಇಂಡಿಯಾ ಟುಡೇಗೆ ನೀಡಿರುವ ಮಾಹಿತಿಯಂತೆ,  ಸೌಂದರ್ಯ ಅವರು, ಮಗು ಜನಿಸಿದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದರು. ಈ ವಿಚಾರ ಕುಟುಂಬಸ್ಥರಿಗೂ ತಿಳಿದಿತ್ತು. ಆಕೆ ಖುಷಿಯಾಗಿರಲಿ ಎಂದು ಕೆಲವೊಮ್ಮೆ ಯಡಿಯೂರಪ್ಪನವರೇ ತಮ್ಮ ಮನೆಗೆ ಕರೆದುಕೊಂಡು ಇರಿಸಿಕೊಳ್ಳುತ್ತಿದ್ದರು. ಆದರೆ, ಎಷ್ಟು ಖುಷಿಯಾಗಿಟ್ಟುಕೊಳ್ಳಲು ನೋಡಿದರೂ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ

ಭೀಕರ ಚಳಿಗೆ ನಾಲ್ವರು ಭಾರತೀಯರ ಸಾವು; ಗುರುತು ಪತ್ತೆ

ಎಸ್ಸಿ-ಎಸ್ಟಿಗೆ ಬಡ್ತಿ ಮೀಸಲಾತಿ: ಮಾನದಂಡ ಹಾಕಲು ಸುಪ್ರೀಂ ಕೋರ್ಟ್‌ ನಿರಾಕರಣೆ

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು:ವಿವಾದಾತ್ಮಕ ಸ್ವಾಮೀಜಿ ರಿಷಿ ಕುಮಾರ್

ಯುವತಿಯ ಅಪಹರಣ: ಲೈಂಗಿಕ ದೌರ್ಜನ್ಯವೆಸಗಿ ಬೀದಿಯಲ್ಲಿ ಮೆರವಣಿಗೆ

ಇತ್ತೀಚಿನ ಸುದ್ದಿ