ದಿಲ್ಲಿಯ ಹಲವು ಪ್ರದೇಶಗಳಲ್ಲಿ ಜಲದಿಗ್ಬಂಧನ: ಕುಡಿಯುವ ನೀರಿಗೂ ಪರದಾಟ..! - Mahanayaka
1:10 AM Wednesday 22 - October 2025

ದಿಲ್ಲಿಯ ಹಲವು ಪ್ರದೇಶಗಳಲ್ಲಿ ಜಲದಿಗ್ಬಂಧನ: ಕುಡಿಯುವ ನೀರಿಗೂ ಪರದಾಟ..!

14/07/2023

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಯಮುನಾ ನದಿಯ ನೀರಿನ ಮಟ್ಟವು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ದೆಹಲಿಯ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ.

ಪ್ರವಾಹದ ಪರಿಸ್ಥಿತಿಯಿಂದಾಗಿ ನೀರು ಶುದ್ಧೀಕರಣ ಘಟಕಗಳನ್ನು ಬಂದ್‌ ಮಾಡಲಾಗಿದೆ. ಹೀಗಾಗಿ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚಿದ ಪರಿಣಾಮ ರಾಜಧಾನಿಯ ಜನರು ಕುಡಿಯುವ ನೀರಿಗೂ ಪರದಾಡಬೇಕಾಗಿದೆ.

ಇನ್ನು ಕೆಲವೆಡೆ ರಸ್ತೆಯಲ್ಲಿ ತುಂಬಿರುವ ನೀರಿನಲ್ಲಿ ಕರೆಂಟ್‌ ಪ್ರವಹಿಸುತ್ತಿದ್ದು, ಹಲವು ನಾಗರಿಕರಿಗೆ ವಿದ್ಯುತ್‌ ಶಾಕ್‌ ಆಗಿದೆ ಎನ್ನಲಾಗಿದೆ. ಸುದ್ದಿ ತಿಳಿದ ನಂತರ ಸಂಬಂಧಿತ ಪ್ರಾಧಿಕಾರಗಳು ಈ ವಿದ್ಯುತ್ ಕಂಬಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿವೆ.

ರಾಷ್ಟ್ರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ನೀರಿನ ಅಭಾವದೊಂದಿಗೆ, ವಿದ್ಯುತ್‌ ಅಭಾವವನ್ನೂ ದೆಹಲಿ ಜನರು ಎದುರಿಸುತ್ತಿದ್ದಾರೆ.

ಈ ನಡುವೆ, ನೆಲದಲ್ಲೆಲ್ಲಾ ನೀರು ತುಂಬಿರುವುದರಿಂದ ಹಾವುಗಳು ಮೇಲಕ್ಕೆ ಬಂದಿದ್ದು, ನೀರಿನ ಮೇಲೆಲ್ಲಾ ಹರಿದಾಡುತ್ತಿದೆ. ಈಗಾಗಲೇ ಅತಂತ್ರರಾಗಿರುವ ಮಂದಿ ಹಾವುಗಳಿಂದಾಗಿ ಇನ್ನಷ್ಟು ಭಯಭೀತಗೊಂಡಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ