ಯತ್ನಾಳ್ ಮಾತುಗಳು ತೋಳ ಬಂತು ತೋಳ ಎಂಬ ಹಾಗೆ: ಬಿ.ಸಿ.ಪಾಟೀಲ್ ವ್ಯಂಗ್ಯ - Mahanayaka
12:13 AM Wednesday 28 - January 2026

ಯತ್ನಾಳ್ ಮಾತುಗಳು ತೋಳ ಬಂತು ತೋಳ ಎಂಬ ಹಾಗೆ: ಬಿ.ಸಿ.ಪಾಟೀಲ್ ವ್ಯಂಗ್ಯ

01/02/2021

ದಾವಣಗೆರೆ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಬದಲಾವಣೆ ಮಾಡಲಾಗುವುದು, ಮುಂದೆ ನಾನೇ ಸಿಎಂ ಎಂಬೆಲ್ಲ ಹೇಳಿಕೆ ನೀಡುತ್ತಿದ್ದು, ಈ ಸಂಬಂಧ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.

 ಬಸನಗೌಡ ಪಾಟೀಲ್ ಯತ್ನಾಳ್​ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರ ಮಾತು ತೋಳ ಬಂತು ತೋಳ ಮತ್ತು ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ ಅವರ ಮಾತು ಎಂದು ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆಂದು ಅಮಿತ್ ಶಾ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದರು

ಕೇಂದ್ರ ಸರ್ಕಾರ ಒಳ್ಳೆಯ ಬಜೆಟ್ ನೀಡುವ ನಿರೀಕ್ಷೆಯಿದೆ. ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಸಾಧ್ಯತೆಯಿದೆ ಎಂದು ಬಿ.ಸಿ.ಪಾಟೀಲ್ ಇದೇ ಸಂದರ್ಭ  ಹೇಳಿದರು.

ಇತ್ತೀಚಿನ ಸುದ್ದಿ