ತೀವ್ರ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ - Mahanayaka
8:51 PM Wednesday 10 - December 2025

ತೀವ್ರ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ

02/01/2021

ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ತಲೆಸುತ್ತು ಬಂದಿದ್ದು, ಇದರಿಂದಾಗಿ ಅವರನ್ನು ತಕ್ಷಣವೇ ವುಡ್ ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.  ಈ ವೇಳೆ ಗಂಗೂಲಿ ಅವರಿಗೆ ಹೃದಯದ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಂಗೂಲಿ ಅವರಿಗೆ ಆ್ಯಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ ಎಂದು ವೈದ್ಯರ ಹೇಳಿದ್ದು, ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ತೆರಳುವ ಸಾಧ್ಯತೆ ಇದೆ. ಸದ್ಯ ಡಾ.ಸರೋಜ್ ಮೊಂಡಾಲ್ ನೇತೃತ್ವದಲ್ಲಿ ಮೂವರು ವೈದ್ಯರು ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ