ಸಿಎಂ ಯಡಿಯೂರಪ್ಪನವರನ್ನು ನಗಿಸಿದ ಅಂಗನವಾಡಿ ಕಾರ್ಯಕರ್ತೆ! - Mahanayaka
10:28 AM Saturday 25 - October 2025

ಸಿಎಂ ಯಡಿಯೂರಪ್ಪನವರನ್ನು ನಗಿಸಿದ ಅಂಗನವಾಡಿ ಕಾರ್ಯಕರ್ತೆ!

yediyurappa
09/06/2021

ಬೆಂಗಳೂರು: ಯಾವಾಗಲೂ ಗಂಟಿಕ್ಕಿದ ಮುಖ ಭಾವದ, ಗಂಭೀರವಾದ ಮುಖದೊಂದಿಗೆ ಕಂಡು ಬರುವ ಸಿಎಂ ಯಡಿಯೂರನವರು ನಗುವುದು ಅಪರೂಪ. ಆದರೆ, ವಿಡಿಯೋ ಸಂವಾದದ ಸಂದರ್ಭದಲ್ಲಿ  ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅವರನ್ನು ನಗಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತೆಯರ ಜೊತೆಗೆ ಸಿಎಂ ಯಡಿಯೂರಪ್ಪನವರು ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಸಿಎಂ ಜೊತೆಗೆ ಮಾತನಾಡುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು “ನಾನು ನಿಮ್ಮ ಜೊತೆಗೆ ಮಾತನಾಡೋದಾ…!” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ನಿಮ್ಮ ಜತೆ ನಾನು ಮಾತಾಡೋದಾ..! ಯಡಿಯೂರಪ್ಪ ಸಾಹೇಬ್ರೆ ನನಗೆ ಖುಷಿ ಆಗ್ತಿದೆ” ಎನ್ನುತ್ತಿದ್ದಂತೆಯೇ ಮನತುಂಬಿ ನಕ್ಕ ಸಿಎಂ, ಹೇಳಮ್ಮಾ, ಎನ್ ಸಮಾಚಾರ ಎಂದು, ನಗುಮುಖದೊಂದಿಗೆ ಅಂಗನವಾಡಿ ಕಾರ್ಯಕರ್ತೆಗೆ ಮಾತನಾಡಲು ಧೈರ್ಯ ತುಂಬಿದ್ದಾರೆ.

ಇತ್ತೀಚಿನ ಸುದ್ದಿ