ಬಿಗ್ ನ್ಯೂಸ್: ಸಿಎಂ ಯಡಿಯೂರಪ್ಪಗೆ ಇನ್ನೂ ಸಿಗದ ಹೈಕಮಾಂಡ್ ಸಂದೇಶ | ದೆಹಲಿಗೆ ಹಾರಿದ ಪ್ರಲ್ಹಾದ್ ಜೋಶಿ - Mahanayaka

ಬಿಗ್ ನ್ಯೂಸ್: ಸಿಎಂ ಯಡಿಯೂರಪ್ಪಗೆ ಇನ್ನೂ ಸಿಗದ ಹೈಕಮಾಂಡ್ ಸಂದೇಶ | ದೆಹಲಿಗೆ ಹಾರಿದ ಪ್ರಲ್ಹಾದ್ ಜೋಶಿ

yediyurappa joshi
25/07/2021

ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಯಾವುದೇ ಕ್ಷಣಗಳಲ್ಲಿ ಸಿಎಂ ಯಡಿಯೂರಪ್ಪನವರಿಗೆ ಹೈಕಮಾಂಡ್ ಅಂತಿಮ ಸಂದೇಶ ತಲುಪುವ ಸಾಧ್ಯತೆಗಳಿವೆ. ಇನ್ನೂ ಬೆಳಗಾವಿ ಪ್ರವಾಸದಲ್ಲಿರುವ ಯಡಿಯೂರಪ್ಪನವರು ತಮ್ಮ ಸ್ಥಾನದಿಂದ ಇಳಿಯುವ ಕುರಿತ ಪ್ರಶ್ನೆಗೆ ಕಾದು ನೋಡೋಣ ಎಂದಷ್ಟೆ ಉತ್ತರಿಸಿದ್ದಾರೆ.


Provided by

ಸದ್ಯ ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ವರದಿಯಾಗಿದೆ. ಬೆಳಗಾವಿಯಲ್ಲಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಹೈಕಮಾಂಡ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಸದ್ಯ ಅವರು ಬೆಂಗಳೂರಿನತ್ತ ಬರುತ್ತಿದ್ದು, ಬೆಂಗಳೂರಿಗೆ ಬರುತ್ತಿದ್ದಂತೆಯೇ ಅವರಿಗೆ ಹೈಕಮಾಂಡ್ ಸಂದೇಶ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಗೆ ಹಾರಿದ ಪ್ರಲ್ಹಾದ್ ಜೋಶಿ

ನಾಯಕತ್ವ ಬದಲಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ  ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದಂತೆಯೇ, ಇಂದು ಮಧ್ಯಾಹ್ನ ಪ್ರಲ್ಹಾದ್ ಜೋಶಿ ಅವರನ್ನು ಹೈಕಮಾಂಡ್ ದೆಹಲಿಗೆ ಆಹ್ವಾನಿಸಿದ್ದಾರೆ. ಆದರೆ ಇಂದು ಸಂಜೆ ಪ್ರಲ್ಹಾದ್ ಜೋಶಿ ದೆಹಲಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.

 

ಇತ್ತೀಚಿನ ಸುದ್ದಿ