ದಕ್ಷಿಣ ಆಫ್ರಿಕಾದಲ್ಲಿ ಏಕಾಏಕಿ ಇಳಿಕೆಯಾದ ಒಮಿಕ್ರಾನ್ ಪ್ರಕರಣ: ತಜ್ಞರು ಹೇಳಿದ ಅಚ್ಚರಿಯ ಸಂಗತಿ ಏನು ಗೊತ್ತಾ?
ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಉತ್ತುಂಗಕ್ಕೆ ಏರಿದ್ದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಇದೀಗ ಏಕಾಏಕಿ ಇಳಿ ಮುಖವಾಗಿದ್ದು, ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ನಿಂದಾಗಿ ಯಾವುದೇ ಸಾವು ಪ್ರಕರಣಗಳು ದಾಖಲಾಗಿಲ್ಲ.
ಕಳೆದ ಗುರುವಾರ ದಕ್ಷಿಣ ಆಫ್ರಿಕಾದಾದ್ಯಂತ ಸುಮಾರು 27 ಸಾವಿರ ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರದ ಹೊತ್ತಿಗೆ ಅದು 15,424ಕ್ಕೆ ಇಳಿಕೆಯಾಗಿದೆ. ದಕ್ಷಿಣ ಆಫ್ರಿಕಾದ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಾದ ರಾಜಧಾನಿ ಜೊಹಾನ್ಸ್ ಬರ್ಗ್, ಪ್ರಿಟೋರಿಯಾ ಸೇರಿದಂತೆ ಹಲವೆಡೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ತಗ್ಗಿದೆ.
ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು, ಸರಿಯಾದ ಟೆಸ್ಟ್ ನಡೆಸದಿರುವುದು, ಪರೀಕ್ಷಾ ವರದಿ ವಿಳಂಬವೂ ಕಾರಣವಾಗಿರಬಹುದು ಆದರೆ, ಒಮಿಕ್ರಾನ್ ಪ್ರಕರಣ ವೇಗವಾಗಿ ಏರಿಕೆಯಾಗಿ ವೇಗವಾಗಿ ಇಳಿಯಬಹುದು ಎನ್ನುವುದು ತಿಳಿದು ಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಂದೆಯ ಚಟ ಬಿಡಿಸಿದ ಮಗಳ ‘ಹಠ’: ಅದ್ದೂರಿ ಮೆರವಣಿಗೆ ಮಾಡಿ ಮಗಳಿಗೆ ಮೊಬೈಲ್ ಕೊಡಿಸಿದ ಬಡ ತಂದೆ
ಅರ್ಚಕರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ!
ಮಂಗಳೂರು: ಮೀನುಗಾರನನ್ನು ತಲೆಕೆಳಗಾಗಿಸಿ ನೇತುಹಾಕಿ ದೌರ್ಜನ್ಯ: ವಿಡಿಯೋ ವೈರಲ್
ಬಿಜೆಪಿ ಆಡಳಿತದಲ್ಲಿ ಮಾತ್ರ ಹಿಂದೂಗಳ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ | ಯೋಗಿ ಆದಿತ್ಯನಾಥ್
ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಿಂದಿನಿಂದ ಕಾಯ್ದೆಗೆ ಬೆಂಬಲ ನೀಡುತ್ತಿದೆ | ಬಿಜೆಪಿ ಶಾಸಕ ಯತ್ನಾಳ್
ಮತಾಂತರ ನಿಷೇಧ ಕಾಯ್ದೆಯ ದುರ್ಬಳಕೆಯ ಸಾಧ್ಯತೆ ಹೆಚ್ಚಿದೆ: ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಂ




























