ಎಲ್ಲ ಹಿಂದೂಗಳಿಗೂ ಅರ್ಚಕ ವೃತ್ತಿ ನೀಡುತ್ತಿರುವುದಕ್ಕೆ ಪೇಜಾವರ ಶ್ರೀ ವಿರೋಧ | ಬ್ರಾಹ್ಮಣರಿಗೆ ಮಾತ್ರವೇ ಅರ್ಚಕ ವೃತ್ತಿ ನೀಡಲು ಒತ್ತಾಯ - Mahanayaka
4:03 AM Wednesday 15 - October 2025

ಎಲ್ಲ ಹಿಂದೂಗಳಿಗೂ ಅರ್ಚಕ ವೃತ್ತಿ ನೀಡುತ್ತಿರುವುದಕ್ಕೆ ಪೇಜಾವರ ಶ್ರೀ ವಿರೋಧ | ಬ್ರಾಹ್ಮಣರಿಗೆ ಮಾತ್ರವೇ ಅರ್ಚಕ ವೃತ್ತಿ ನೀಡಲು ಒತ್ತಾಯ

02/03/2021

ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಎಲ್ಲ ಹಿಂದೂಗಳಿಗೆ ಸರ್ಕಾರವು ಅರ್ಚಕ ವೃತ್ತಿಯನ್ನು ನೀಡುತ್ತಿರುವುದರ ವಿರುದ್ಧ ಉಡುಪಿ ಮಠದ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದ್ದು, ಅರ್ಚಕ ವೃತ್ತಿ ಕೇವಲ ಬ್ರಾಹ್ಮಣರಿಗೆ ಮಾತ್ರವೇ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.


Provided by

ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆ, ಸರ್ಕಾರ ಹೀಗೆ ಮಾಡದೇ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು. ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತು ಕೊಳ್ಳುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ ಎಂದು ಮೈಸೂರಿನ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಹೇಳಿದರು.

ಬ್ರಾಹ್ಮಣರಿಗೆ ಅರ್ಚಕರ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕೊಡದಿರುವುದು ಬೇಸರದ ಸಂಗತಿ. ಸರ್ಕಾರ ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಸಮಸ್ಯೆಗಳೊಳಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯೊಂದೇ ಪರಿಹಾರ ಎಂದು ಅವರು ಬ್ರಾಹ್ಮಣರಿಗೆ ಕರೆ ನೀಡಿದರು.

whatsapp

ಇತ್ತೀಚಿನ ಸುದ್ದಿ