ಎಣ್ಣೆ ಪಾರ್ಟಿಯ ಬಳಿಕ ಡಬ್ಬಲ್ ಮರ್ಡರ್ | ಸ್ನೇಹಿತರಿಂದಲೇ ನಡೆಯಿತು ದುಷ್ಕೃತ್ಯ! - Mahanayaka
10:40 AM Saturday 23 - August 2025

ಎಣ್ಣೆ ಪಾರ್ಟಿಯ ಬಳಿಕ ಡಬ್ಬಲ್ ಮರ್ಡರ್ | ಸ್ನೇಹಿತರಿಂದಲೇ ನಡೆಯಿತು ದುಷ್ಕೃತ್ಯ!

crime news
01/09/2021


Provided by

ಆನೇಕಲ್:  ಎಣ್ಣೆ ಪಾರ್ಟಿಯ ಬಳಿಕ ಡಬ್ಬಲ್ ಮರ್ಡರ್ ನಡೆದಿದ್ದು,  ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ, ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಸಂದ್ರದ ಖಾಲಿ ನಿವೇಶನದಲ್ಲಿ ನಡೆದಿದೆ.

ಹತ್ಯೆಗೀಡಾದವರು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರು ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವ ಕಾರಣ, ಜೊತೆಯಾಗಿ ಎಣ್ಣೆ ಪಾರ್ಟಿ ನಡೆಸಿದ ಬಳಿಕ ಜೊತೆಯಲ್ಲಿದ್ದವರೇ ಹತ್ಯೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಸ್ನೇಹಿತರೇ ಈ ಜೋಡಿ ಕೊಲೆ ಮಾಡಿರಬಹುದು ಎಂದು ಆರೋಪಿಸಲಾಗಿದ್ದು, ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೊಲೆಯಾದವರ ಗುರುತು ಇನ್ನು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಉತ್ತರ ಭಾರತ ಮೂಲದ ವಲಸಿಗ ಕೂಲಿ ಕಾರ್ಮಿಕರು ಇರಬಹುದು ಎಂಬ ಮಾಹಿತಿ ದೊರೆತಿದೆ. ನಿನ್ನೆ ರಾತ್ರಿ ಎಣ್ಣೆ ಪಾರ್ಟಿ ನಡೆಸಿದ ಬಳಿಕ ಈ ಹತ್ಯೆ ನಡೆದಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?

ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!

ಗಾಯದ ಮೇಲೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ಮಹಿಳೆಯ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್ | ಆರೋಪಿ ಅರೆಸ್ಟ್

ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಫೋಕ್ಸೋ ಪ್ರಕರಣದ ಆರೋಪಿ

ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು

ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ

ಇತ್ತೀಚಿನ ಸುದ್ದಿ