ಮತಾಂತರ ನಿಷೇಧ ಕಾಯ್ದೆಯ ನಡುವೆಯೇ ಶುರುವಾಯ್ತು ಧರ್ಮಾಂಧರ ಉಪಟಳ: 160 ವರ್ಷ ಹಳೆಯ ಚರ್ಚ್ ಧ್ವಂಸ - Mahanayaka
12:32 PM Thursday 15 - January 2026

ಮತಾಂತರ ನಿಷೇಧ ಕಾಯ್ದೆಯ ನಡುವೆಯೇ ಶುರುವಾಯ್ತು ಧರ್ಮಾಂಧರ ಉಪಟಳ: 160 ವರ್ಷ ಹಳೆಯ ಚರ್ಚ್ ಧ್ವಂಸ

church
23/12/2021

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತಾಂತರ ವಿರೋಧಿ ಮಸೂದೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಧರ್ಮಾಂಧ ಶಕ್ತಿಗಳ ಉಟಳ ಆರಂಭಗೊಂಡಿದ್ದು,  ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 160 ವರ್ಷಗಳಷ್ಟು ಹಳೆಯ ಚರ್ಚ್ ಧ್ವಂಸಗೊಳಿಸಲಾಗಿದೆ.

ಇಲ್ಲಿನ ಸೂಸೈಪಾಳ್ಯದಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿದ್ದ ಸೈಂಟ್ ಆಂಥೋನಿ ಪ್ರತಿಮೆಗೆ ಕಲ್ಲೆಸೆದು ವಿರೂಪಗೊಳಿಸಲಾಗಿದೆ ಎನ್ನಲಾಗಿದ್ದು, ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗಾಗಿ ಪ್ರತಿಮೆಯನ್ನು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿದ್ದಾರೆ.

ಗುರುವಾರ ಬೆಳಗ್ಗೆ 5:30ರ ವೇಳೆಗೆ ಚರ್ಚ್ ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಚರ್ಚ್ ನ ಪಾದ್ರಿ ಫಾದರ್ ಜೋಸ್ಪೆ ಆಂಥೋನಿ ಡೇನಿಯಲ್ ತಿಳಿಸಿದ್ದಾರೆ.  ಬೆಳಗ್ಗಿನ ಜಾವ 5:40ಕ್ಕೆ ಈ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಈ ರೀತಿಯ ಕೃತ್ಯ ಈವರೆಗೆ ಇಲ್ಲಿ ನಡೆದೇ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ ಮತಾಂತರ ನಿಷೇಧ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ರೈಸ್ತ ಪ್ರಾರ್ಥನಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು, ಅಡಚಣೆ ಸೃಷ್ಟಿಸುವಂತಹ ಘಟನೆಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕರ್ನಾಟಕಕ್ಕೆ ತಾಕತ್ತಿದ್ದರೆ ಎಂ​ಇಎಸ್​ ಬ್ಯಾನ್​ ಮಾಡಲಿ: ಸಂಜಯ್​ ರಾವತ್​

ಮತಾಂತರ ನಿಷೇಧ ಒಪ್ಪಿಕೊಳ್ಳಿ; ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹೋಗಬೇಡಿ | ಬಿ.ಎಸ್.ಯಡಿಯೂರಪ್ಪ

ದಕ್ಷಿಣ ಆಫ್ರಿಕಾದಲ್ಲಿ ಏಕಾಏಕಿ ಇಳಿಕೆಯಾದ ಒಮಿಕ್ರಾನ್ ಪ್ರಕರಣ: ತಜ್ಞರು ಹೇಳಿದ ಅಚ್ಚರಿಯ ಸಂಗತಿ ಏನು ಗೊತ್ತಾ?

ಅರ್ಚಕರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ!

ಮಂಗಳೂರು: ಮೀನುಗಾರನನ್ನು ತಲೆಕೆಳಗಾಗಿಸಿ ನೇತುಹಾಕಿ ದೌರ್ಜನ್ಯ: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ