ಟ್ರಕ್-ಪಿಕಪ್ ನಡುವೆ ಭೀಕರ ಅಪಘಾತ:  ಯೋಧ ಸೇರಿದಂತೆ ಮೂವರು  ಸಾವು - Mahanayaka

ಟ್ರಕ್-ಪಿಕಪ್ ನಡುವೆ ಭೀಕರ ಅಪಘಾತ:  ಯೋಧ ಸೇರಿದಂತೆ ಮೂವರು  ಸಾವು

bihara
04/04/2021

ಬಿಹಾರ:  ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತ ಸಂಭವಿಸಿ ಯೋಧ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರಿನ ಕತಿಹಾರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.


Provided by

ಇಂದು ಬೆಳಗ್ಗೆ 5 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಔಟ್‍ಪೋಸ್ಟ್ ಏರಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿ 31ರ ಬಳಿ ನಿಲ್ಲಿಸಲಾಗಿದ್ದ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎಂದು  ಹೆಚ್ಚುವರಿ ಇನ್ಸ್ಪೆಕ್ಟರ್ ಸಂಜಯ್ ಸಿಂಗ್ ತಿಳಿಸಿದ್ದಾರೆ.

ವಾನ್ ನ ಡ್ರೈವರ್ 50 ವರ್ಷ ವಯಸ್ಸಿನ ಹಮೀದ್ ಹಾಗೂ 22 ವರ್ಷ ವಯಸ್ಸಿನ ರಾಕೇಶ್ ಪಂಡಿತ್ ಎಂಬವರು ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  28 ವರ್ಷ ವಯಸ್ಸಿನ ಯೋಧ ಆದರ್ಶ್ ಕುಮಾರ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ