ಯೋಗ ತರಬೇತಿಯ ವೇಳೆ 5 ಯುವತಿಯರಿಗೆ ಲೈಂಗಿಕ ಕಿರುಕುಳ: ತರಬೇತುದಾರನ ವಿರುದ್ಧ ದೂರು - Mahanayaka

ಯೋಗ ತರಬೇತಿಯ ವೇಳೆ 5 ಯುವತಿಯರಿಗೆ ಲೈಂಗಿಕ ಕಿರುಕುಳ: ತರಬೇತುದಾರನ ವಿರುದ್ಧ ದೂರು

yoga
30/11/2021

ಸಿಂಗಪುರ: ಯೋಗ ತರಬೇತಿಯ ವೇಳೆ ಐವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತ ಮೂಲದ 32 ವರ್ಷ ವಯಸ್ಸಿನ ಯೋಗ ತರಬೇತುದಾರನ ವಿರುದ್ಧ  ದೂರು ದಾಖಲಾಗಿದೆ.

2020ರಲ್ಲಿ  ಈತ 24ರಿಂದ 29 ವರ್ಷ ವಯಸ್ಸಿನ ಯುವತಿಯರ ಜೊತೆಗೆ, ತರಬೇತಿ ನೀಡುತ್ತಿದ್ದ ವೇಳೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದ ಎಂದು ಹೇಳಲಾಗಿದೆ. ಆದರೆ, ಆರೋಪಿಯ ಹೆಸರನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ ಎಂದು ವರದಿಯಾಗಿದೆ.

ಇನ್ನೂ ಈ ಪ್ರಕರಣ ಸಂಬಂಧ ಆರೋಪಿಯು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ನ ವಿಚಾರಣೆಗೆ ಹಾಜರಾಗಿದ್ದು, ಕೋರ್ಟ್ ಆತನಿಗೆ ಜಾಮೀನು ನೀಡಿದೆ. ಆದರೆ, ಈ ಆರೋಪ ಸಾಬೀತಾದರೆ, ಆರೋಪಿಗೆ  2 ವರ್ಷ ಜೈಲು, ದಂಡ, ಛಡಿಯೇಟು ನೀಡುವ ಶಿಕ್ಷೆ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ

ದೇವೇಗೌಡರಿಗೆ ಅದ್ದೂರಿ ಸ್ವಾಗತ ನೀಡಿದ ಪ್ರಧಾನಿ ಮೋದಿ: ಫೋಟೋ ವೈರಲ್

ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08

ಕಲ್ಯಾಣ ಮಂಟಪಕ್ಕೆ ಬೆಂಕಿ ಬಿದ್ದರೂ, ನಿಶ್ಚಿಂತೆಯಿಂದ ಊಟ ಮುಂದುವರಿಸಿದ ಅತಿಥಿಗಳು! ವಿಡಿಯೋ ವೈರಲ್

ಅಜ್ಜಿಯ ಜೊತೆಗೆ ಮದುವೆಗೆ ಬಂದಿದ್ದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

 

ಇತ್ತೀಚಿನ ಸುದ್ದಿ