‘ನಕಲಿ ದೇವಮಾನವ’ ಎಂದು ಇಂತಹವರನ್ನೇ ಕರೆದಿದ್ದೀರಿ: ಪಾದಯಾತ್ರೆಗೆ ಬಂದ ಹೋರಾಟಗಾರರಿಗೆ ತಡೆ!

ಬೆಳ್ತಂಗಡಿ: ‘ನಕಲಿ ದೇವಮಾನವ’ ಎಂದು ಕರೆದಿದ್ದಕ್ಕೆ ಸೌಜನ್ಯ ಪರ ನ್ಯಾಯಕ್ಕಾಗಿ ಮೆರವಣಿಗೆ ಮಾಡಿದ ಕಬ್ಜಾ ಶರಣ್ ಮತ್ತು ಇತರರನ್ನು ದೇವಸ್ಥಾನ ಪ್ರವೇಶಕ್ಕೆ ಬಿಡದೇ ತಡೆದ ಘಟನೆ ಧರ್ಮಸ್ಥಳದಲ್ಲಿ ನಿನ್ನೆ(ಜು.22) ನಡೆದಿದೆ.
ಮೂಲತಃ ಕಲಬುರ್ಗಿಯವರಾದ ಮತ್ತು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಬ್ಜಾ ಶರಣ್ ಹಾಗೂ 12 ಮಂದಿಯ ಪ್ರತಿಭಟನಾಕಾರರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ವೇಳೆ ತಮ್ಮನ್ನು ಯಾರೂ ಫಾಲೋ ಮಾಡುತ್ತಿದ್ದರು. ನಮಗೇನಾದರೂ ಆದರೆ ಅದಕ್ಕೆ ನಕಲಿ ದೇವಮಾನವನೇ ಕಾರಣ ಎಂದು ಹೇಳಿಕೆ ನೀಡಿದ್ದರು.
ಪ್ರತಿಭಟನಾಕಾರರು ಧರ್ಮಸ್ಥಳ ತಲುಪಿದ ವೇಳೆ ದೇವಸ್ಥಾನದ ಪ್ರವೇಶದ್ವಾರದ ಬಳಿ ಗುಂಪೊಂದು ತಡೆದು, ನೀವು ನಕಲಿ ದೇವಮಾನವರು ಎಂದು ಯಾರನ್ನೂ ಕರೆದಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆತ್ತಿಕೊಂಡಿತ್ತಲ್ಲೇ, ‘ಇಂತಹ ವ್ಯಕ್ತಿ’ಯನ್ನೇ ಟಾರ್ಗೆಟ್ ಮಾಡಿ ನಕಲಿ ದೇವಮಾನವ ಎಂದು ಹೇಳಿದ್ದೀರಿ ಎಂದು ವಾಗ್ವಾದ ನಡೆಸಿದರು.
ಹೋರಾಟದ ಹೆಸರಿನಲ್ಲಿ ಧರ್ಮದ ಬಗ್ಗೆ ಅವಹೇಳನ ಮಾಡಿದ್ದೀರಿ, ನಿಮಗೆ ದೇವಸ್ಥಾನಕ್ಕೆ ಪ್ರವೇಶಿಸುವ ಹಕ್ಕಿಲ್ಲ ಎಂದು ತಾಕೀತು ಮಾಡಿತು. ಇದೇ ವೇಳೆ ಅನುಮತಿ ಪಡೆಯದೇ ಪಾದಯಾತ್ರೆ ನಡೆಸಿದ ಹಿನ್ನೆಲೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡರು. ಎರಡೂ ಕಡೆಯವರು ಪ್ರಕರಣ ದಾಖಲಿಸದ ಕಾರಣ ಪಾದಯಾತ್ರೆಗೆ ಆಗಮಿಸಿದ್ದ ತಂಡ ಹಿಂದಿರುಗಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD