ಪಾಕಿಸ್ತಾನದ ವಿರುದ್ಧ ಗೆದ್ದಿರೋದಕ್ಕೆ ಅಸೂಯೆಯ ಅಭಿನಂದನೆ ಸಲ್ಲಿಸಿದ ಚಕ್ರವರ್ತಿ ಸೂಲಿಬೆಲೆ: ನೆಟ್ಟಿಗರಿಂದ ಆಕ್ರೋಶ - Mahanayaka

ಪಾಕಿಸ್ತಾನದ ವಿರುದ್ಧ ಗೆದ್ದಿರೋದಕ್ಕೆ ಅಸೂಯೆಯ ಅಭಿನಂದನೆ ಸಲ್ಲಿಸಿದ ಚಕ್ರವರ್ತಿ ಸೂಲಿಬೆಲೆ: ನೆಟ್ಟಿಗರಿಂದ ಆಕ್ರೋಶ

virat kohli
25/10/2022

ಭಾರತ—ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಕ್ರಿಕೆಟ್ ತಂಡವು ಭರ್ಜರಿ ಜಯ ಸಾಧಿಸಿದೆ. ಭಾರತದ ಈ ಗೆಲುವು ಇಡೀ ದೇಶಕ್ಕೆ ಸಂತಸ ತಂದಿದ್ದರೂ, ಬಿಜೆಪಿ ಪರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಚಾರದಲ್ಲೂ ಕೊಂಕು ಮಾತನಾಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಚಕ್ರವರ್ತಿ ಸೂಲಿಬೆಲೆ ಅವರು ಮಾಡಿರುವ ಟ್ವೀಟ್ ವೊಂದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಭಾರತದ ತಂಡಕ್ಕೆ ಅಸೂಯೆ ತುಂಬಿದ ಸೂಲಿಬೆಲೆ ಅವರ ಅಭಿನಂದನೆಗಳು ಬೇಕಿರಲಿಲ್ಲ ಎಂದಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಅವರು, ಪಟಾಕಿ ಸಿಡಿಸದೇ, ದೀಪಾವಳಿ ಆಚರಿಸಿ ಎಂದು ಕರೆ ನೀಡಿದ್ದರು. ಪರಿಸರ ಮಾಲಿನ್ಯವಾಗದಿರಲಿ ಎಂಬ ಕಾಳಜಿಯಿಂದ ವಿರಾಟ್ ಕೊಹ್ಲಿ ಈ ರೀತಿಯ ಕರೆ ನೀಡಿದ್ದರಾದರೂ, ಕೆಲವರು ಕೊಹ್ಲಿಯ ಹೇಳಿಕೆಯನ್ನು ಇನ್ನಿಲ್ಲದ ವಿವಾದವಾಗಿ ಮಾರ್ಪಡಿಸಿದ್ದರು. ಕೊಹ್ಲಿ ವಿರುದ್ಧ ನಿಂದನೆ, ಟ್ರೋಲ್ ಗಳ ಸುರಿಮಳೆಯೇ ಸುರಿದಿತ್ತು. ಕೊಹ್ಲಿ ಅವರು ಅಂದು ನೀಡಿದ್ದ ಹೇಳಿಕೆಯನ್ನೇ ಬೊಟ್ಟು ಮಾಡಿ ತೋರಿಸಿರುವ ಚಕ್ರವರ್ತಿ ಸೂಲಿಬೆಲೆ, ಪಂದ್ಯ ಗೆದ್ದಿದ್ದಕ್ಕೆ ಅಭಿನಂದನೆಗಳು, ಆದರೆ ಆಚರಿಸುವುದು ಹೇಗೆ? ನೀವು ಪಟಾಕಿ ರಹಿತ ದೀಪಾವಳಿಗೆ ಸಲಹೆ ನೀಡಿದ್ದೀರಿ ಎಂದು ಅಸೂಯೆಯುಕ್ತ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪಟಾಕಿ ಹೊಡೆದು ದೀಪಾವಳಿ ಆಚರಿಸುವುದು, ಹೊಡೆಯದೇ ದೀಪಾವಳಿ ಆಚರಿಸುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ಹಾಗೆಯೇ ಪಟಾಕಿ ಹೊಡೆಯದೇ ದೀಪಾವಳಿ ಆಚರಿಸಿ ಅಂತ ಕೊಹ್ಲಿ ಕರೆ ನೀಡಿದ್ದರು. ಅದು ಪರಿಸರದ ಕುರಿತು ಅವರಿಗಿರುವ ವೈಯಕ್ತಿಕ ಕಾಳಜಿಯೂ ಹೌದು. ಆದರೆ, ಈ ವಿಚಾರವನ್ನು ಪ್ರತಿಯೊಂದರಲ್ಲೂ ತುರುಕಿ ಅಸೂಯೆಯ ಪ್ರತಿಕ್ರಿಯೆ ನೀಡುವುದು ಎಷ್ಟು ಸರಿ? ಇಡೀ ಭಾರತಕ್ಕೆ ಟೀಮ್ ಇಂಡಿಯಾದ ಗೆಲುವು ಕಂಡರೆ, ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೇವಲ ಪಟಾಕಿ ಕಂಡಿದ್ದಾದರೂ ಹೇಗೆ? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುವಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ