ರೈಲಿನ ಮೇಲೆ ಹತ್ತಿ ಹೈಟೆನ್ಷನ್ ವೈರ್ ಹಿಡಿದ ಯುವಕ: ಬೆಚ್ಚಿಬಿದ್ದ ಜನ

ಭೋಪಾಲ್: ಕಂಟೈನರ್ ರೈಲಿನ ಮೇಲೆ ಹತ್ತಿದ ವ್ಯಕ್ತಿಯೊಬ್ಬ ಹೈಟೆನ್ಷನ್ ವೈರ್ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಭೋಪಾಲ್ ರೈಲ್ವೆ ಜಂಕ್ಷನ್ ನಲ್ಲಿ ನಡೆದಿದೆ.
ಹೈಟೆನ್ಷನ್ ವೈರ್ ಗಳನ್ನು ಹಿಡಿದ ಪರಿಣಾಮ ಆತನ ದೇಹದಿಂದ ಹೊಗೆ ಹೊರಬರುತ್ತಿದ್ದು ರೈಲಿನ ಛಾವಣಿಯ ಮೇಲೆ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಘಟನೆ ವೇಳೆ ರೈಲ್ವೆ ಪ್ಲಾಟ್ ಫಾರ್ಮ್ ಗಳಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ತಕ್ಷಣವೇ ಆತನನ್ನು ಕೆಳಗಿಳಿಸಿ , ಚಿಕಿತ್ಸೆಗಾಗಿ ಭೋಪಾಲ್ನ ಹಮಿದಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೈ ಟೆನ್ಷನ್ ತಂತಿಗಳನ್ನು ಸ್ಪರ್ಶಿಸಿದ ಪರಿಣಾಮ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯು ಆತ್ಮಹತ್ಯೆಗೆ ಪ್ರಯತ್ನಿಸಿದ ಹಿಂದಿನ ಕಾರಣ ತಿಳಿದು ಬಂದಿಲ್ಲ.ಈ ಬಗ್ಗೆ GRP (ಸರ್ಕಾರಿ ರೈಲ್ವೆ ಪೊಲೀಸ್) ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು GRP ಪೊಲೀಸರ ಕಟ್ಟುನಿಟ್ಟಿನ ಕಾವಲು ಇದ್ದರೂ, ಆ ವ್ಯಕ್ತಿ ರೈಲಿನ ಮೇಲ್ಛಾವಣಿಯನ್ನು ಯಾವ ರೀತಿ ಹತ್ತಿದ್ದಾನೆ ಎಂಬುದು ಗಮನಾರ್ಹವಾಗಿದೆ. ಈ ಘಟನೆಯು ರೈಲ್ವೆ ನಿಲ್ದಾಣದ ಭಾರಿ ಭದ್ರತಾ ಲೋಪವನ್ನು ಸೂಚಿಸುತ್ತದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth