ಮರದ ಕೊಂಬೆ ಕಡಿಯುತ್ತಿದ್ದ ಯುವಕ ವಿದ್ಯುತ್ ಅಘಾತಕ್ಕೆ ಬಲಿ - Mahanayaka
6:21 PM Thursday 16 - October 2025

ಮರದ ಕೊಂಬೆ ಕಡಿಯುತ್ತಿದ್ದ ಯುವಕ ವಿದ್ಯುತ್ ಅಘಾತಕ್ಕೆ ಬಲಿ

sujay
24/11/2022

ಕುಂದಾಪುರ: ಮರಕ್ಕೆ ಹತ್ತಿ ಕೊಂಬೆ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಚೆಕ್‌ ಪೋಸ್ಟ್‌ ಬಳಿ ನ.23ರಂದು 1:40ಕ್ಕೆ ನಡೆದಿದೆ.


Provided by

ಮೃತರನ್ನು ಗುಜ್ಜಾಡಿ ಗ್ರಾಮದ ನಾಯಕವಾಡಿ ನಿವಾಸಿ 20 ವರ್ಷದ ಸುಜಯ್ ಎಂದು ಗುರುತಿಸಲಾಗಿದೆ. ಸಂಗಮೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಕಟ್ಟೆಪೂಜೆಗೆ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಜಯ್ ಅವರು ನಿನ್ನೆ ನಾಯಕವಾಡಿ ಚೆಕ್‌ಪೋಸ್ಟ್‌ಬಳಿ ಇರುವ ಕಟ್ಟೆಗೆ ಮಾವಿನ ತೋರಣ ಕಟ್ಟುವ ಸಲುವಾಗಿ ಮಾವಿನ ಮರಕ್ಕೆ ಹತ್ತಿ ಕೊಂಬೆ ಕಡಿಯುತ್ತಿದ್ದರು.

ಈ ವೇಳೆ ಮರದ ಕೊಂಬೆಯು ಅಲ್ಲೆ ಹಾದು ಹೋಗಿರುವ ವಿದ್ಯುತ್‌ ತಂತಿಯ ಮೇಲೆ ಬಿದ್ದಿದೆ. ಇದರಿಂದ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಸುಜಯ್‌ ಅವರಿಗೆ ತಗುಲಿದ್ದು, ಅಸ್ವಸ್ಥಗೊಂಡ ಅವರನ್ನು ಸ್ಥಳೀಯರ ಸಹಾಯದಿಂದ ಮರದಿಂದ ಇಳಿಸಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಸುಜಯ್‌ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ