ಬೈಕ್ ಟ್ಯಾಕ್ಸಿ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ: ದೂರು ದಾಖಲು
ಬೆಂಗಳೂರು: ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಚಾಲಕನ ವಿಕೃತಿಯನ್ನು ವಿಡಿಯೋ ಮಾಡಿ ಯುವತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ತನ್ನ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಚಾಲಕನನ್ನು ಯುವತಿ ಪ್ರಶ್ನಿಸಿದ್ದಾಳೆ. ಆದರೂ, ಆತ ಕಿರುಕುಳ ನೀಡುತ್ತಲೇ ಇದ್ದ.
ಆಕೆ ತನ್ನ ಸ್ನೇಹಿತನಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ತಲುಪಿದ ಯುವತಿಯ ಸ್ನೇಹಿತ ಚಾಲಕನನ್ನು ತರಾಟೆಗೆತ್ತಿಕೊಂಡಾಗ ತಪ್ಪಾಯ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























