ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಸಾವಿಗೆ ಶರಣು!
15/02/2024
ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ಯುವತಿಯೋರ್ವಳು ನೇತ್ರಾವತಿ ನದಿಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಬಂಟ್ವಾಳದ ನೇತ್ರಾವತಿ ನದಿಯ ರೈಲ್ವೇ ಓವರ್ ಬ್ರಿಡ್ಸ್ ಗೆ ರೈಲು ತಲುಪಿದಾಗ ಯುವತಿ ಏಕಾಏಕಿ ರೈಲಿನಿಂದ ನದಿಗೆ ಹಾರಿದ್ದಾರೆ.
ಮೃತ ಯುವತಿಯನ್ನು ನಯನಾ ಎಂ.ಜಿ.(27) ಎಂದು ಗುರುತಿಸಲಾಗಿದ್ದು, ಈಕೆ ತುಮಕೂರು ತಾಲೂಕಿನ ಮಿಡಿಗೇಶಿ ಪಡಸಾಕೆಹಟ್ಟಿ ನಿವಾಸಿ ಎಂದು ಗುರುತಿಸಲಾಗಿದೆ. ಯುವತಿ ತನ್ನ ಬಳಿಯಿದ್ದ ಬ್ಯಾಗ್ ನ್ನು ರೈಲಿನಲ್ಲಿ ಬಿಟ್ಟು ನದಿಗೆ ಹಾರಿದ್ದಾಳೆ.
ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಬಂಟ್ವಾಳ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು.




























