ಯೂಟ್ಯೂಬ್‌ ನಲ್ಲಿ ಯುವತಿಯ ಫೋಟೋ ದುರ್ಬಳಕೆ: ಸಾಫ್ಟ್‌ವೇರ್‌ ದಂಪತಿ ಬಂಧನ - Mahanayaka
5:08 AM Thursday 16 - October 2025

ಯೂಟ್ಯೂಬ್‌ ನಲ್ಲಿ ಯುವತಿಯ ಫೋಟೋ ದುರ್ಬಳಕೆ: ಸಾಫ್ಟ್‌ವೇರ್‌ ದಂಪತಿ ಬಂಧನ

dakshina kannada news
01/02/2022

ಬಂಟ್ವಾಳ: ಬಂಟ್ವಾಳದ ಯುವತಿಯೊಬ್ಬಳ ಫೋಟೋವನ್ನು ಯೂಟ್ಯೂಬ್‌ ಚಾನೆಲ್‌ ಮೂಲಕ ದುರ್ಬಳಕೆ ಮಾಡಿರುವ ಪ್ರಕರಣದ ಸಂಬಂಧ ಶಿವಮೊಗ್ಗ ಮೂಲದ ದಂಪತಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.


Provided by

ಹರೀಶ್‌ ಮತ್ತು ಅನುಷಾ ಬಂಧಿತ ಆರೋಪಿಗಳು. ಬಂಟ್ವಾಳದ ಯುವತಿಯ ಫೋಟೋ ದುರ್ಬಳಕೆ ಮಾಡಿಕೊಂಡಿರುವ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ನಗರ ಠಾಣಾ ಎಸ್ಸೈ ಅವಿನಾಶ್‌ ನೇತೃತ್ವದ ತಂಡ ಶಿವಮೊಗ್ಗದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ದಂಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ ಗಳಾಗಿದ್ದು, ಅವರು ಕನ್ನಡ ಲೈಟ್‌ ಎನ್ನುವ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ಅದರ ಮೂಲಕ ವೀಕ್ಷಕರ ಗಮನ ಸೆಳೆಯುವ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಿ ಹಣ ಗಳಿಸುತ್ತಿದ್ದರು. ಅದಕ್ಕಾಗಿ ಫೋಟೋ ಬಳಕೆ ಮಾಡಲಾಗುತ್ತಿದ್ದು, ಅದರಂತೆ ಜ್ಯೋತಿಷಿಯ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳದ ಯುವತಿಯ ಫೋಟೋ ಬಳಕೆ ಮಾಡಿದ್ದಾರೆ ಎಂದು ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳೆಯರ ಮೇಲೆ ಚಿರತೆ ದಾಳಿ

ನನ್ನ ಮೇಲಿನ ಆರೋಪ ಸುಳ್ಳು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್

ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್: 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬಜೆಟ್‌ ಅಧಿವೇಶನ: ರಾಷ್ಟ್ರಪತಿ ಭಾಷಣದ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಕೆಲ ಕೇಂದ್ರ ಸಚಿವರು

ಕಾರು ಅಡ್ಡಗಟ್ಟಿ ಕಾನ್‌ ಸ್ಟೆಬಲ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ

ಇತ್ತೀಚಿನ ಸುದ್ದಿ